‘ದಿ ಕೇರಳ ಸ್ಟೋರಿ’ ಚಿತ್ರ 9 ದಿನಗಳಲ್ಲಿ 112.99 ಕೋಟಿ ರೂ. ಗಳಿಕೆ ಮಾಡಿದೆ ಎಂದು ಚಿತ್ರತಂಡ ತಿಳಿಸಿದೆ.
ಸನ್‌ಶೈನ್ ಪಿಕ್ಚರ್ಸ್ ಪ್ರೊಡಕ್ಷನ್ ಹೌಸ್ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ, ಈ ಚಿತ್ರ ಶನಿವಾರ ಒಂದೇ ದಿನ ₹19.5 ಕೋಟಿ ಗಳಿಸಿದೆ. ದೇಶದಲ್ಲಿ ಕೇರಳ ಸ್ಟೋರಿಯ ಒಟ್ಟು ಗಳಿಕೆ 112.99 ಕೋಟಿಯಾಗಿದೆ ಎಂದು ತಿಳಿಸಲಾಗಿದೆ.
ಮೇ 12ರಂದು ವಿಶ್ವದ 37 ದೇಶಗಳಲ್ಲಿ ಚಿತ್ರ ಬಿಡುಗಡೆಯಾಗಿದೆ. ಕೇರಳದ ಹಿಂದೂ ಯುವತಿಯರು ಇಸ್ಲಾಂಗೆ ಮತಾಂತರಗೊಂಡ ನಂತರ ಹೇಗೆ ಭಯೋತ್ಪಾದಕ ಸಂಘಟನೆಯ ಜಾಲಕ್ಕೆ ಬೀಳುತ್ತಾರೆ ಎನ್ನುವ ಕಥೆ ಚಿತ್ರದಲ್ಲಿದೆ.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಚಿತ್ರಕ್ಕೆ ನಿಷೇಧ ಹೇರಲಾಗಿದೆ. ಆದರೆ ಬಿಜೆಪಿ ಆಡಳಿತವಿರುವ ಮಧ್ಯಪ್ರದೆಶ ಮತ್ತು ಉತ್ತರಪ್ರದೇಶದಗಳಲ್ಲಿ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಲಾಗಿದೆ.
ತಮಿಳುನಾಡು ಹಾಗೂ ಪಶ್ಚಿಮ ಬಂಗಳದಲ್ಲಿ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡದಿರುವ ಬಗ್ಗೆ ಚಿತ್ರತಂಡ ಕೋರ್ಟ್ ಮೊರೆ ಹೋಗಿದೆ. ಈಗಾಗಲೇ ಸುಪ್ರಿಂ ಕೋರ್ಟ್ ಈ ಬಗ್ಗೆ ಸರಕಾರದಿಂದ ವಿವರಣೆ ಕೋರಿದೆ.
ಅದಾ ಶರ್ಮಾ,ಯೋಗಿತಾ ಬಿಹಾನಿ ,ಸೋನಿಯಾ ಬಲಾನಿ, ಸಿದ್ಧಿ ಇದ್ನಾನಿ ಮುಂತಾದ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ.
—–
Be the first to comment