ಪ್ರಭಾಸ್ ಮತ್ತು ಕೃತಿ ಸನೂನ್ ನಟನೆಯ ‘ಆದಿಪುರುಷ’ ಸಿನಿಮಾ ಬಿಡುಗಡೆ ಆಗುತ್ತಿರುವ ಹೊತ್ತಿನಲ್ಲಿ ಚಿತ್ರತಂಡದ ಮೇಲೆ ದೂರು ದಾಖಲಾಗಿದೆ.
ಸಂಜಯ್ ತಿವಾರಿ ಎನ್ನುವವರು ಚಿತ್ರದ ವಿರುದ್ಧ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ರಿಲೀಸ್ ಆದ ಪೋಸ್ಟರ್ ನಲ್ಲಿ ನಿರ್ಮಾಪಕರು ಮತ್ತು ಕಲಾವಿದರು ಗಂಭೀರ ತಪ್ಪುಗಳನ್ನು ಮಾಡಿದ್ಧಾರೆ. ಈ ತಪ್ಪುಗಳು ನಾಳೆ ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಬಹುದು. ಇದು ಒಂದು ವರ್ಗದ ಜನರ ಧಾರ್ಮಿಕ ಭಾವನೆಗೂ ನೋವನ್ನುಂಟು ಮಾಡಬಹುದು. ಸಿನಿಮಾದಲ್ಲಿ ತಪ್ಪುಗಳು ಕಾಣದಂತೆ ನಿರ್ದೇಶನ ನೀಡಬೇಕು ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.
ಈ ಹಿಂದೆ ಟ್ರೈಲರ್ ರಿಲೀಸ್ ಆದಾಗ ಹಾಗೂ ಪೋಸ್ಟರ್ ಬಿಡುಗಡೆ ಆದ ವೇಳೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ಚಿತ್ರದ ಮೇಲಿತ್ತು. ಈಗ ದೂರು ದಾಖಲಾಗಿದೆ.
ಈ ಹಿಂದೆಯೇ ವಾರಿಸು, ತುನಿವು ಚಿತ್ರಗಳ ಜೊತೆ `ಆದಿಪುರುಷ್’ ಚಿತ್ರ ತೆರೆ ಕಾಣಬೇಕಿತ್ತು. ಆದರೆ ಚಿತ್ರದ ಟೀಸರ್‌ಗೆ ಕಳಪೆ ಎಂದು ಪ್ರತಿಕ್ರಿಯೆ ಬಂದ ಕಾರಣ ರಿಲೀಸ್ ಡೇಟ್ ಮುಂದಕ್ಕೆ ಹಾಕಲಾಗಿತ್ತು.
`ಆದಿಪುರುಷ್’ ಸಿನಿಮಾದ ಟೀಸರ್‌ನ ಕಳಪೆ ಗ್ರಾಫಿಕ್ಸ್ ವರ್ಕ್ ನಿಂದ ಚಿತ್ರತಂಡಕ್ಕೆ ಭಾರಿ ಟೀಕೆ ಎದುರಿಸಿತ್ತು. ಈಗ ಸಾಕಷ್ಟು ಕೆಲಸ ಮಾಡಿರುವ ಚಿತ್ರವನ್ನು ಜೂನ್ 16ರಂದು ರಿಲೀಸ್ ಮಾಡಲಾಗುತ್ತಿದೆ ಎಂದು ನಿರ್ದೇಶಕ ಓಂ ರೌತ್ ಹೇಳಿದ್ದಾರೆ.
ಅತ್ಯಾಧುನಿಕ ಗ್ರಾಫಿಕ್ಸ್ ತಂತ್ರಜ್ಞಾನ ಮತ್ತು 3ಡಿ ದೃಶ್ಯಗಳು ‘ಆದಿಪುರುಷ್’ ಸಿನಿಮಾದ ಹೈಲೈಟ್ ಆಗಿದೆ. ಪ್ರೇಕ್ಷಕರು 3ಡಿ ಅನುಭವವನ್ನು ಎಂಜಾಯ್ ಮಾಡಬೇಕು ಎನ್ನುವ ಕಾರಣಕ್ಕೆ ವಿಶೇಷ ಕಾಳಜಿ ವಹಿಸಿ ಚಿತ್ರತಂಡ ಕೆಲಸ ಮಾಡಿದೆ.
—–
Be the first to comment