Pavithra lokesh: ಪವಿತ್ರಾ ಲೋಕೇಶ್ ಮದುವೆ ಆದರೇ?

ತೆಲುಗು ನಟ ನರೇಶ್‌ ಅವರು ಪವಿತ್ರಾ ಲೋಕೇಶ್‌ ಅವರನ್ನು ಮದುವೆ ಆದರೇ ಎನ್ನುವ ಬಗ್ಗೆ ಉತ್ತರ ನೀಡಿದ್ದಾರೆ.

‘ಪವಿತ್ರಾ ಲೋಕೇಶ್ ಅವರನ್ನು ಮದುವೆ ಆಗಿದ್ದೀರಾ?’ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿರುವ ನರೇಶ್, ”ಕೆಲವರು ತಾಳಿ ಕಟ್ಟಿ ಮದುವೆ ಮಾಡಿಕೊಳ್ಳುತ್ತಾರೆ. ಕೆಲವರು ಉಂಗುರ ಬದಲಾಯಿಸಿಕೊಂಡು ಮದುವೆ ಎನ್ನುತ್ತಾರೆ. ಇನ್ನು ಕೆಲವರು ಧರ್ಮ ಬದಲಾಯಿಸಿಕೊಂಡು ಮದುವೆಯಾಗುತ್ತಾರೆ. ನನ್ನ ದೃಷ್ಟಿಯಲ್ಲಿ ಮದುವೆ ಎನ್ನುವುದು ಎರಡು ಮನಸ್ಸುಗಳ ಮಿಲನ. ನಮ್ಮಿಬ್ಬರ ಮನಸ್ಸು ಸಂದಿಸಿವೆ. ನಮ್ಮದು ಹೃದಯಗಳ ಒಕ್ಕೂಟ’ ಎಂದಿದ್ದಾರೆ. ಆ ಮೂಲಕ ಶಾಸ್ತ್ರಬದ್ಧವಾಗಿ ಅಥವಾ ಕಾನೂನು ಬದ್ಧವಾಗಿ ತಾವು ಮದುವೆಯಾಗಿಲ್ಲ ಆದರೆ ಮಾನಸಿಕವಾಗಿ ಮದುವೆಯಾಗಿದ್ದೇವೆ” ಎಂದು ಅವರು ಹೇಳಿದ್ದಾರೆ.

ಇವರಿಬ್ಬರ ನಡುವಿನ ಸಂಬಂಧದ ಬಗ್ಗೆ ಕೆಲ ತಿಂಗಳ ಹಿಂದೆ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಬಹಳ ಚರ್ಚೆಯಾಗಿತ್ತು. ಪವಿತ್ರಾ ಅವರೊಟ್ಟಿಗೆ ಆತ್ಮೀಯ ನಂಟು ಹೊಂದಿರುವ ನರೇಶ್ ವಿರುದ್ಧ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಮಾಧ್ಯಮಗಳ ಮುಂದೆ ಆರೋಪಗಳನ್ನು ಮಾಡಿದ್ದರು. ನರೇಶ್ ಒಬ್ಬ ಲಂಪಟ, ಪವಿತ್ರಾ ಲೋಕೇಶ್ ತಮ್ಮ ಸಂಸಾರ ಒಡೆದಿದ್ದಾರೆ ಎಂದು ದೂರಿದ್ದರು. ನರೇಶ್, ಪವಿತ್ರಾ ಸಹ ರಮ್ಯಾರ ಆರೋಪಗಳಿಗೆ ಪ್ರತ್ಯುತ್ತರ ನೀಡಿದ್ದರು.

ನರೇಶ್ ಹಾಗೂ ಪವಿತ್ರಾ ಲೋಕೇಶ್ ಅಧಿಕೃತವಾಗಿ ಮದುವೆ ಆಗಲು ಸಾಧ್ಯವಿಲ್ಲ. ನರೇಶ್ ತಮ್ಮ ಮೂರನೇ ಪತ್ನಿ ರಮ್ಯಾ ರಘುಪತಿಗೆವಿಚ್ಛೇದನ ನೀಡಿಲ್ಲ. ಹೀಗಾಗಿ ಪವಿತ್ರಾರನ್ನು ಮದುವೆ ಆಗಲು ನರೇಶ್​ಗೆ ಕಾನೂನು ತೊಡಕಿದೆ.

ಕೆಲ ತಿಂಗಳ ಹಿಂದೆ ನರೇಶ್, ತಮ್ಮ ಹಾಗೂ ಪವಿತ್ರಾ ಲೋಕೇಶ್​ರ ಮದುವೆ ಶಾಸ್ತ್ರದ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಮನೆಯೊಂದರಲ್ಲಿ ನರೇಶ್ ಹಾಗೂ ಪವಿತ್ರಾ ವಧು-ವರರ ಕಾಸ್ಟ್ಯೂಮ್​ನಲ್ಲಿ ಸಪ್ತಪದಿ ತುಳಿಯುತ್ತಿರುವ ವಿಡಿಯೋ ಚರ್ಚೆಗೆ ಕಾರಣವಾಗಿತ್ತು. ನರೇಶ್ ಹಾಗೂ ಪವಿತ್ರಾ ನಿಜಕ್ಕೂ ಮದುವೆಯಾದರೆ ಎಂದು ಪ್ರಶ್ನೆ ಮೂಡಿತ್ತು. ಬಳಿಕ ಅದು ಸಿನಿಮಾಕ್ಕಾಗಿ ಆಗಿರುವ ಮದುವೆ ಎಂಬುದು ತಿಳಿದುಬಂತು.

ನರೇಶ್‌ ಈಗ ತಮ್ಮ ಹಾಗೂ ಪವಿತ್ರಾ ನಡುವಣ ಸಂಬಂಧ, ಮೂರನೇ ಪತ್ನಿ ರಮ್ಯಾ ರಘುಪತಿ ಮಾಡಿದ ಆರೋಪಗಳು, ನಡೆದ ಘಟನೆಗಳನ್ನೇ ಆದರಿಸಿ ಮಳ್ಳಿ ಪಳ್ಳಿ ಎಂಬ ಸಿನಿಮಾವನ್ನುನಿರ್ಮಿಸಿದ್ದಾರೆ.  ಎಂಎಸ್ ರಾಜು ಆಕ್ಷನ್-ಕಟ್ ಹೇಳಿದ್ದಾರೆ.

ಈಗಾಗಲೇ ಸಿನಿಮಾದ ಟ್ರೈಲರ್ ಹಾಗೂ ಟೀಸರ್ ಬಿಡುಗಡೆ ಆಗಿದ್ದು, ಸಿನಿಮಾ ಮೇ 26 ರಂದು ತೆರೆಗೆ ಬರಲಿದೆ.
—–

Be the first to comment

Leave a Reply

Your email address will not be published. Required fields are marked *

Translate »
error: Content is protected !!