Terror: ಆದಿತ್ಯ ಹೊಸ ಚಿತ್ರದ ಟೀಸರ್ ರಿಲೀಸ್

ನಟ ಆದಿತ್ಯ ಅವರ ಹೊಸ ಚಿತ್ರ ‘ಟೆರರ್‌’ ಟೀಸರ್‌ ಬಿಡುಗಡೆ ಆಗಿದೆ.

ಇತ್ತೀಚೆಗೆ ಆದಿತ್ಯ ಅವರ ಜನ್ಮದಿನದಂದು ಟೀಸರ್‌ ನ್ನು ನಿರ್ದೇಶಕ, ನಿರ್ಮಾಪಕ ಆರ್‌.ಚಂದ್ರು ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಚಂದ್ರು, ‘ಸಿನಿಮಾದ ಶೀರ್ಷಿಕೆಯೇ ಗಮನ ಸೆಳೆಯುತ್ತದೆ. ಟೀಸರ್‌ ಮೂಲಕ ಚಿತ್ರ ದೊಡ್ಡ ಹಿಟ್ ಆಗುವ ಲಕ್ಷಣಗಳು ಕಾಣುತ್ತಿದೆ’ ಎಂದರು.

ಈಗಾಗಲೇ ಶೇ 30ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಬೆಂಗಳೂರು ಸುತ್ತಮುತ್ತ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ’ ಎಂದು ನಿರ್ದೇಶಕ ರಂಜನ್ ಹೇಳಿದರು.

ಸಿನಿಮಾದಲ್ಲಿ ಆದಿತ್ಯ ನಾಯಕರಾಗಿ ನಟಿಸುತ್ತಿದ್ದು, ಶ್ರೀನಗರ ಕಿಟ್ಟಿ ಅವರೂ ಪಾತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಕೋಟೆ ಪ್ರಭಾಕರ್, ಧರ್ಮ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

‘ಎ’ ಸಿನಿಮಾ ಬಿಡುಗಡೆಯಾಗಿ 25 ವರ್ಷ ಆದ ಮೇಲೆ ಮತ್ತೊಂದು ನಿರೀಕ್ಷಿತ ಸಿನಿಮಾ ಮಾಡುತ್ತಿದ್ದೇನೆ ಎಂದು ನಿರ್ಮಾಪಕ ಸಿಲ್ಕ್ ಮಂಜು ಹೇಳಿದರು.

__

Be the first to comment

Leave a Reply

Your email address will not be published. Required fields are marked *

Translate »
error: Content is protected !!