Ajaneesh: ಅಜನೀಶ್​​ಗೆ ಹೆಚ್ಚಿದ ಡಿಮ್ಯಾಂಡ್, ಪರಭಾಷೆ ಚಿತ್ರಕ್ಕೆ ಸಂಗೀತ

ಕಾಂತಾರ ಖ್ಯಾತಿಯ ಸಂಗೀತ ನಿರ್ದೇಶಕ ಅಜನಿ ಲೋಕನಾಥ್ ಅವರಿಗೆ ಡಿಮ್ಯಾಂಡ್ ಹೆಚ್ಚಿದ್ದು, ಮೊದಲ ಬಾರಿಗೆ ಪರಭಾಷಾ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಅಜನೀಶ್​ ಲೋಕನಾಥ್​​ ಮೊದಲ ಬಾರಿಗೆ ಸಾರಿ ಹೆಸರಿನ ಮರಾಠಿ ಸಿನಿಮಾಕ್ಕೆ ಸಂಗೀತ ನಿರ್ದೇಶಿಸಿದ್ದಾರೆ.

ಕಾಂತಾರ ಸಿನಿಮಾ ಬಳಿಕ ಅಜನೀಶ್​​ ಬೇಡಿಕೆ ಹೆಚ್ಚಾಗಿದೆ. ಮರಾಠಿಗರು ಇವರ ಸಂಗೀತ ಸಂಯೋಜನೆಯನ್ನು ಕಂಡು ಕರೆಸಿಕೊಂಡಿದ್ದಾರೆ. ಮರಾಠಿ ಸಿನಿಮಾದಲ್ಲಿ ಕೆಲಸ ಮಾಡಿದ್ದ ಸಂತಸವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸಾರಿ ಕನ್ನಡದ ರಿಮೇಕ್​ ಸಿನಿಮಾ ಆಗಿದೆ. ಕನ್ನಡದಲ್ಲಿ ದಿಯಾ ಸಿನಿಮಾ ದೊಡ್ಡ ಹಿಟ್​ ಕೊಟ್ಟಿತ್ತು. 2020ರಲ್ಲಿ ಬಿಡುಗಡೆಗೊಂಡ ಈ ಸಿನಿಮಾ ಜನರ ಮನಗೆದ್ದಿತ್ತು. ಈ ಸಿನಿಮಾ ಮರಾಠಿಗೆ ಸಾರಿ ಹೆಸರಿನಲ್ಲಿ ರಿಮೇಕ್ ಆಗಿದೆ. ಮೇ 5 ರಂದು ಈ ಸಿನಿಮಾ ರಿಲೀಸ್​ ಆಗಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!