Tiger3: ಶಾರುಖ್‌, ಸಲ್ಲು ಸೆಟ್‌ ಗೆ 35 ಕೋಟಿ ರೂ. ವ್ಯಯ!

ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಅವರ ಆಯಕ್ಷನ್​ ಸೀನ್​​ ಒಂದಕ್ಕೆ ಭರ್ಜರಿ 35 ಕೋಟಿ ರೂಪಾಯಿಯ ಸೆಟ್​ ನಿರ್ಮಾಣ ಮಾಡಲಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಟೈಗರ್​ 3 ಸಿನಿಮಾದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಮೂಲಗಳ ಪ್ರಕಾರ, ನಿರ್ಮಾಪಕ ಆದಿತ್ಯ ಚೋಪ್ರಾ ಅವರು “ಟೈಗರ್ 3″ನಲ್ಲಿ ಬೃಹತ್ ಆಕ್ಷನ್ ಸೆಟ್ ನ್ನು ರಚಿಸಲು 35 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದ್ದಾರೆ.

ಇಬ್ಬರು ಮೆಗಾಸ್ಟಾರ್‌ಗಳನ್ನು ದೊಡ್ಡ ಪರದೆಯ ಮೇಲೆ ಅತ್ಯಂತ ಅದ್ಭುತವಾದ ಆಕ್ಷನ್ ಸೀಕ್ವೆನ್ಸ್‌ನಲ್ಲಿ ಪ್ರದರ್ಶಿಸುವ ಮೂಲಕ ಮರೆಯಲಾಗದ ಸಿನಿಮೀಯ ಅನುಭವವನ್ನು ಸೃಷ್ಟಿಸುವುದು ನಿರ್ಮಾಪಕರ ಆಶಯ ಆಗಿದೆ. ಈ ಹಿನ್ನೆಲೆ “ಪಠಾಣ್” ಯಶಸ್ಸಿನ ನಂತರ ಚೋಪ್ರಾ ಅವರು “ಟೈಗರ್ 3″ಗೆ ವಿಶೇಷ ಮಹತ್ವ ಕೊಡುತ್ತಿದ್ದಾರೆ.

ಈ ಸಿನಿಮಾವನ್ನು ನೆಕ್ಸ್ಟ್​ ಲೆವೆಲ್​ಗೆ ಕೊಂಡೊಯ್ಯಲು ಚಿತ್ರತಂಡ ಪೂರ್ಣ ಶ್ರಮ ಹಾಕಿದತ್ತಿದೆ. ಕೇವಲ ಸೆಟ್​ಗೆ ಕೋಟಿಗಟ್ಟಲೆ ರೂಪಾಯಿ ವ್ಯಯಿಸುತ್ತಿರುವಾಗ ಈ ನಟರ ಸಂಭಾವನೆ ಎಷ್ಟಿರಬಹುದು ಎಂದು ಅಭಿಮಾನಿಗಳು ಆಲೋಚಿಸುತ್ತಿದ್ದಾರೆ.

“ಟೈಗರ್ 3” ಸಿನಿಮಾ ಯಶ್​ ರಾಜ್​ ಫಿಲ್ಮ್ಸ್​ನ ಸ್ಪೈ ಯೂನಿವರ್ಸ್‌ನ ಐದನೇ ಸಿನಿಮಾ. ಚಿತ್ರ ದೀಪಾವಳಿಯಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ಟೈಗರ್​ 3 ಸಿನಿಮಾದ ಆಯಕ್ಷನ್ ಸೀನ್​ ಇಡೀ ಭಾರತೀಯ ಚಿತ್ರರಂಗದಲ್ಲಿ ಚಿತ್ರೀಕರಿಸಲಾಗುವ ಅತ್ಯಂತ ದುಬಾರಿ ಸೀನ್​​ ಆಗಲಿದೆ ಎಂದು ವದಂತಿಗಳಿವೆ. ಈವರೆಗೆ ಇಷ್ಟು ದೊಡ್ಡ ಮಟ್ಟದಲ್ಲಿ ಸೀನ್​ ನಿರ್ಮಾಣಗೊಂಡಿಲ್ಲ. ಈ ಹಿನ್ನೆಲೆ ಅಪಾರ ಸಂಖ್ಯೆಯ ಅಭಿಮಾನಿಗಳು ಸಿನಿಮಾ ಬಿಡುಗಡೆಯನ್ನು ಕುತೂಹಲದಿಂದ ನಿರೀಕ್ಷಿಸುತ್ತಿದ್ದಾರೆ.

ಸಲ್ಮಾನ್​​ ಎದುರಾಳಿಯಾಗಿ ಇಮ್ರಾನ್ ಹಶ್ಮಿ ಈ ಚಿತ್ರದಲ್ಲಿ ನಟಿಸಲಿದ್ದಾರೆ. ಸಲ್ಮಾನ್​ ವಿರುದ್ಧ ಹೋರಾಡುವ ಐಎಸ್‌ಐ ಏಜೆಂಟ್ ಜೋಯಾ ಪಾತ್ರದಲ್ಲಿ ಕತ್ರಿನಾ ಕೈಫ್ ನಟಿಸುತ್ತಿದ್ದಾರೆ. ಈ ಮೊದಲು ತೆರೆಕಂಡಿರುವ ಟೈಗರ್​ 1 ಮತ್ತು 2 ಚಿತ್ರದಲ್ಲೂ ಸಲ್ಮಾನ್​ ಮತ್ತು ಕತ್ರಿನಾ ಸ್ಕ್ರೀನ್​ ಶೇರ್ ಮಾಡಿದ್ದರು.

ಮೇ. 8ರಿಂದ ಶೂಟಿಂಗ್​ ಪ್ರಾರಂಭವಾಗಲಿದೆ. ಫರ್ಹಾದ್ ಸಾಮ್ಜಿ ನಿರ್ದೇಶನದ “ಕಿಸಿ ಕಾ ಭಾಯ್ ಕಿಸಿ ಕಿ ಜಾನ್” ಸಲ್ಮಾನ್​ ಕೊನೆಯ ಚಿತ್ರ. ಏಪ್ರಿಲ್​ 21ರಂದು ತೆರೆಕಂಡ ಈ ಸಿನಿಮಾ 100 ಕೋಟಿ ಕ್ಲಬ್​ ಸೇರಿದೆ.

ಪಠಾಣ್ ಯಶಸ್ಸಿನಲ್ಲಿರುವ​ ಶಾರುಖ್ ಖಾನ್ ಅವರು ರಾಜ್‌ ಕುಮಾರ್ ಹಿರಾನಿ ಅವರ “ಡಂಕಿ” ಮತ್ತು ಅಟ್ಲೀ ಅವರ “ಜವಾನ್” ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಎರಡೂ ಸಿನಿಮಾ ಶೂಟಿಂಗ್​ ಕೊನೆಯ ಹಂತದಲ್ಲಿದೆ.
——

Be the first to comment

Leave a Reply

Your email address will not be published. Required fields are marked *

Translate »
error: Content is protected !!