‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ತಡೆ ನೀಡುವಂತೆ ಎಂದು ಸಲ್ಲಿಕೆ ಆಗಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಕೆಎಂ ಜೊಸೆಫ್ ಮತ್ತು ಬಿವಿ ನಾಗರತ್ನ ಅವರನ್ನೊಳಗೊಂಡ ಪೀಠ ಅರ್ಜಿ ವಿಚಾರಣೆಯನ್ನು ನಿರಾಕರಿಸಿದೆ. ವಕೀಲರಾದ ಕಪಿಲ್ ಸಿಬಾಲ್ ಹಾಗೂ ನಿಜಾಮ್ ಪಾಶಾ ಅವರಿಗೆ ಈ ಕುರಿತು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆ ಮಾಡಲು ಪೀಠ ಆದೇಶಿಸಿದೆ.
‘ದಿ ಕೇರಳ ಸ್ಟೋರಿ ಸಿನಿಮಾ ದ್ವೇಷ ಪೂರಿತ ಸಂಭಾಷಣೆಗಳನ್ನು ಒಳಗೊಂಡಿದೆ. ಇದೊಂದು ಪ್ರೊಪೊಗಾಂಡ ಸಿನಿಮಾ ಆಗಿದೆ’ ಎಂದು ವಕೀಲ ನಿಜಾಮ್ ಪಾಷಾ ವಾದಿಸಿದ್ದರು.
‘ಈ ಚಿತ್ರವನ್ನು ಸೆನ್ಸಾರ್ ಮಂಡಳಿಯವರು ನೋಡಿದ್ದಾರೆ. ಅಲ್ಲಿಂದ ಪ್ರಮಾಣಪತ್ರ ಸಿಕ್ಕಿದೆ. ನೀವು ಸಿನಿಮಾ ರಿಲೀಸ್ನ ಚಾಲೆಂಜ್ ಮಾಡಬೇಕು ಎಂದರೆ ಸೆನ್ಸಾರ್ ಪ್ರಕ್ರಿಯೆಯನ್ನು ಪ್ರಶ್ನೆ ಮಾಡಬೇಕು’ ಎಂದು ಕೋರ್ಟ್ ಹೇಳಿದೆ.
ಮೇ 5ರಂದು ‘ದಿ ಕೇರಳ ಸ್ಟೋರಿ’ ರಿಲೀಸ್ ಆಗುತ್ತಿದೆ. ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.
ಸುದಿಪ್ತೋ ಸೇನ್ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಅದಾ ಶರ್ಮಾ ಅವರು ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ.
‘ದಿ ಕೇರಳ ಸ್ಟೋರಿ’ ನೈಜ ಘಟನೆ ಆಧಾರಿತವಾಗಿದ್ದು ಎಂದು ನಿರ್ದೇಶಕರು ಹೇಳಿದ್ದಾರೆ. ಟ್ರೇಲರ್ ನಲ್ಲಿ ಹಿಂದೂ ಮಹಿಳೆಯನ್ನು ಮತಾಂತರ ಮಾಡಿ ಬಳಿಕ ಐಸಿಸ್ ಸಂಘಟನೆಗೆ ಸೇರ್ಪಡೆ ಮಾಡುವ ಸನ್ನಿವೇಶ ಇದೆ.
—–
Be the first to comment