The kerala story: ʼದಿ ಕೇರಳ ಸ್ಟೋರಿʼಗೆ ʼಎʼ ಸರ್ಟಿಫಿಕೇಟ್, 10 ದೃಶ್ಯಗಳಿಗೆ ಕತ್ತರಿ

ʼದಿ ಕೇರಳ ಸ್ಟೋರಿʼ ಸಿನಿಮಾಕ್ಕೆ ಸೆನ್ಸಾರ್‌ ಬೋರ್ಡ್‌ ʼಎʼ ಸರ್ಟಿಫಿಕೇಟ್‌ ನೀಡಿದ್ದು, 10 ದೃಶ್ಯಗಳಿಗೆ ಕತ್ತರಿ ಹಾಕಿದೆ.

ಸೆನ್ಸಾರ್‌ ಬೋರ್ಡ್‌ ಕೇರಳದ ಮಾಜಿ ಸಿಎಂ ವಿಎಸ್ ಅಚ್ಯುತಾನಂದನ್ ಅವರು ಸಂದರ್ಶನವೊಂದರಲ್ಲಿ ಮತಾಂತರದ ಬಗ್ಗೆ ಮಾತಾನಾಡುವ ಸಂಪೂರ್ಣ ದೃಶ್ಯವನ್ನು ತೆಗೆದು ಹಾಕುವಂತೆ ಹೇಳಿದೆ.

ಅಂತೆಯೇ ಹಿಂದೂ ದೇವರಿಗೆ ಸಂಬಂಧಿಸಿದ “ಭಾರತೀಯ ಕಮ್ಯುನಿಸ್ಟರು ದೊಡ್ಡ ಬೂಟಾಟಿಕೆವುಳ್ಳವರುʼʼ ಎನ್ನುವ ಡೈಲಾಗ್ಸ್‌ ಸೇರಿದಂತೆ 10 ದೃಶ್ಯಗಳನ್ನು ಸೆನ್ಸಾರ್‌ ಬೋರ್ಡ್‌ ತೆಗೆದು ಹಾಕಲು ಸೂಚಿಸಿದೆ.

ಸುದೀಪ್ತೋ ಸೆನ್‌ ನಿರ್ದೇಶನದ ಈ ಸಿನಿಮಾಕ್ಕೆ ಕೇರಳದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಸಿನಿಮಾ ನಿಷೇಧ ಮಾಡುವಂತೆ ಸಿಪಿಎಂ ನೇತೃತ್ವದ ಎಲ್‌ಡಿಎಫ್, ಕಾಂಗ್ರೆಸ್‌ ನೇತೃತ್ವದ ಯುಡಿಎಫ್ ಒತ್ತಾಯಿಸುತ್ತಿವೆ. ಇದರ ಜತೆಗೆ ಕೇರಳದ ಸಂಸ್ಕೃತಿ ಸಚಿವ ಸಾಜಿ ಚೆರಿಯನ್‌ ಈಗಾಗಲೇ ಸಿನಿಮಾ ನಿಷೇಧದ ಬಗ್ಗೆ ಮಾತನಾಡಿದ್ದಾರೆ.

“32 ಸಾವಿರ ಯುವತಿಯರು ಇಸ್ಲಾಂಗೆ ಮತಾಂತರವಾಗಿ, ಐಸಿಸ್‌ಗೆ ಸೇರ್ಪಡೆಯಾದರು ಎಂದು ಸಿನಿಮಾದ ಟ್ರೇಲರ್‌ ನಲ್ಲಿ ಹೇಳಲಾಗಿದೆ. ಈ ರೀತಿ ಆದ 32 ಮಹಿಳೆಯರ ಬಗ್ಗೆ ಸಾಕ್ಷ್ಯ ನೀಡಿದರೆ 11 ಲಕ್ಷ ರೂ. ನೀಡುತ್ತೇನೆ,’ ಎಂದು ವಕೀಲ, ನಟ ಸಿ.ಶುಕ್ಕೂರ್‌ ಸವಾಲು ಹಾಕಿದ್ದಾರೆ.

ಕೇರಳದ ಮುಸ್ಲಿಂ ಯೂತ್ ಲೀಗ್ 32 ಸಾವಿರ ಮಲಯಾಳಿ ಮಹಿಳೆಯರು ಐಎಸ್ ಉಗ್ರಗಾಮಿಗಳಾಗಿದ್ದಾರೆ ಎಂದು ಸಾಭೀತು ಮಾಡುವವರಿಗೆ 1 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದೆ.

ಮೇ 5 ರಂದು ಸಿನಿಮಾ ತೆರೆಗೆ ಬರಲಿದೆ. ಇದು ದೊಡ್ಡ ವಿವಾದವನ್ನೇ ಸೃಷ್ಠಿ ಮಾಡಿದೆ.
—–

Be the first to comment

Leave a Reply

Your email address will not be published. Required fields are marked *

Translate »
error: Content is protected !!