ಉದಯ ಟಿವಿಯಲ್ಲಿ ಹೊಸ ಧಾರಾವಾಹಿ “ಜೈ ಹನುಮಾನ್ “

ಮನರಂಜನಾಕ್ಷೇತ್ರದ ಬದಲಾದ ಸನ್ನಿವೇಶದಲ್ಲಿಕಿರುತೆರೆಯೂ ಹಿರಿತೆರೆಯಷ್ಟು ಶ್ರೀಮಂತವಾಗಿದೆ. ವಿನೂತನಕಥೆ, ನಿರೂಪಣೆಗಳ ಜತೆಗೆಅದ್ಧೂರಿ ನಿರ್ಮಾಣಕ್ಕೂ ಹೆಚ್ಚಿನಒತ್ತು ನೀಡಲಾಗುತ್ತಿದೆ. ಈ ದಿಸೆಯಲ್ಲಿಕನ್ನಡ ಮನರಂಜನಾ ವಾಹಿನಿಗಳ ಹಿರಿಯಣ್ಣ ಉದಯ ಟಿವಿ ‘ಜೈ ಹನುಮಾನ್’ ಎಂಬ ಅದ್ಧೂರಿ ಧಾರಾವಾಹಿಯನ್ನು ಕನ್ನಡದ ವೀಕ್ಷಕರಿಗೆ ನೀಡಲು ಸಿದ್ಧತೆ ನಡೆಸಿದೆ.ಸೆ. 8 ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಪ್ರತೀ ದಿನ ರಾತ್ರಿ 7.30ಕ್ಕೆ ಜೈ ಹನುಮಾನ್‍ಉದಯ ಟಿವಿಯಲ್ಲಿಪ್ರಸಾರವಾಗಲಿದೆ. ಈಗಾಗಲೇ ಪ್ರೋಮೋಗಳು ಪ್ರೇಕ್ಷಕರ ಮನಸೂರೆಗೊಂಡಿದ್ದು, ಸೋಶಿಯಲ್ ಮೀಡಿಯಾಗಳಲ್ಲೂ ಹವಾ ಸೃಷ್ಟಿಸಿದೆ. ಎಲ್ಲ ವಯೋಮಾನದ ವೀಕ್ಷಕರಿಗೂ ಇಷ್ಟವಾಗುವಂಥಕಥೆ, ನಿರೂಪಣೆ ಹಾಗೂ ಕಣ್ಮನ ಸೆಳೆಯುವ ನಿರ್ಮಾಣ ಈ ಧಾರಾವಾಹಿಯ ವಿಶೇಷವಾಗಿದೆ.ಮುಂಬೈ ಮೂಲದ ಪ್ರಸಿದ್ಧ ನಿರ್ಮಾಣ ಸಂಸ್ಥೆ ಕಾಂಟಿಲೋ ಈ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದೆ. ಈಗಾಗಲೇ ಐವತ್ತಕ್ಕೂ ಹೆಚ್ಚಿನ ಸಂಚಿಕೆಗಳ ಚಿತ್ರೀಕರಣ ಪೂರೈಸಿದ್ದು, ಪ್ರತೀ ಪ್ರೇಂನಲ್ಲೂ ಸಿನಿಮಾದಗುಣಮಟ್ಟವನ್ನು ಕಾಯ್ದುಕೊಳ್ಳಲಾಗಿದೆ. ರೋಚಕ ಸನ್ನಿವೇಷಗಳನ್ನು ಹೆಣೆಯಲಾಗಿದ್ದು ಬಿಗಿಯಾದಚಿತ್ರಕಥೆ ಹಾಗೂ ಸತ್ವಯುತ ಸಂಭಾಷಣೆಳು ಈ ಧಾರಾವಾಹಿಯಇನ್ನಷ್ಟು ವಿಶೇಷಗಳಾಗಿವೆ ಎನ್ನುತ್ತಾರೆ ನಿರ್ಮಾಣ ಸಂಸ್ಥೆಯವರು.

ಹದಿನಾಲ್ಕು ಲೋಕಗಳನ್ನೂ ತನ್ನತೆಕ್ಕೆಗೆತೆಗೆದುಕೊಂಡು, ಅಜರಾಮರನಾಗುವ ವರ ಪಡೆದುಕೊಂಡಿದ್ದ ರಾವಣತನ್ನಅಧಿಕಾರ ಲಾಲಸೆಯಿಂದಇತರ ಜೀವಿಗಳ ಮೇಲೆ ಕ್ರೌರ್ಯಎಸಗುತ್ತಿದ್ದ. ಅವನನ್ನು ಸದೆಬಡಿಯಲು ಹನುಮಂತಜನ್ಮ ತಳೆಯುತ್ತಾನೆ. ಅವನ ಹುಟ್ಟಿನ ಹಿನ್ನೆಲೆ. ಮುಂದೆ ಸಾಗುವ ದಾರಿ, ಆತ ಹೇಗೆ ರಾಮನನ್ನು ಸಂಧಿಸುತ್ತಾನೆ? ರಾವಣನ ಸಂಹಾರಕ್ಕೆ ಹೇಗೆ ಸಾಥ್ ನೀಡುತ್ತಾನೆಇತ್ಯಾದಿ ಕುತೂಹಲಗಳಿಗೆ ಉತ್ತರ ನೀಡುತ್ತದೆಜೈ ಹನುಮಾನ್.

ಅದ್ಧೂರಿ ಸೆಟ್‍ಜತೆಗೆ ಪೂರಕವಾದ ಗ್ರಾಫಿಕ್ಸ್‍ಗಳು ಗತವೈಭವವನ್ನು ಮತ್ತೆತೆರೆಯ ಮೇಲೆ ತಂದರೆ, ಕಲಾವಿದರ ಪ್ರೌಢ ನಟನೆಇಡೀಧಾರಾವಾಹಿಯನ್ನು ಮತ್ತೊಂದುಎತ್ತರಕ್ಕೇಕೊಂಡೊಯುತ್ತದೆ. ಅದರಲ್ಲೂಇಲ್ಲಿನ ವೇಷ ಭೂಷಣಗಳು, ಚಿತ್ರ ವಿಚಿತ್ರ ಹೆಸರುಗಳು ಎಲ್ಲ ವರ್ಗಗಳ ವೀಕ್ಷಕರನ್ನೂ, ಮಕ್ಕಳನ್ನೂ ಹಿಡಿದಿಟ್ಟುಕೊಳ್ಳುತ್ತವೆ ಎನ್ನುತ್ತಾರೆ ನಿರ್ದೇಶಕ ವಾಸು

This Article Has 1 Comment
  1. Pingback: track1&2 shop

Leave a Reply

Your email address will not be published. Required fields are marked *

Translate »
error: Content is protected !!