Ragini: ಪೊಲೀಸ್ ಕಸ್ಟಡಿಯ ಅನುಭವವನ್ನು ಪುಸ್ತಕ ರೂಪದಲ್ಲಿ ಬಿಚ್ಚಿಡಲಿರುವ ರಾಗಿಣಿ ದ್ವಿವೇದಿ

ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ 90 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಎದುರಿಸಿದ ಅನುಭವವನ್ನು ಪುಸ್ತಕದ ಮೂಲಕ ಬಿಚ್ಚಿಡಲು ಮುಂದಾಗಿದ್ದಾರೆ.

ಈ ಬಗ್ಗೆ ಸಂದರ್ಶನವೊಂದರಲ್ಲಿ ಅವರು ಮನಬಿಚ್ಚಿ ಮಾತನಾಡಿದ್ದಾರೆ.

ʻʻಕಸ್ಟಡಿಯಲ್ಲಿರುವ ಹಂತವು ನನ್ನ ಜೀವನದ ದೊಡ್ಡ ಕಲಿಕೆಯಾಗಿದೆ. ಆ ರೀತಿ ಕಷ್ಟ ನನ್ನ ಶತ್ರುಗೂ ಬೇಡ ಎಂದು ಪ್ರಾರ್ಥಿಸುವೆ. ಸುಮ್ಮನೆ ಕೂರುವ ವ್ಯಕ್ತಿ ನಾನಲ್ಲ. 90 ದಿನಗಳ ಕಾಲ ನಡೆದ ಘಟನೆಗಳನ್ನು ಬರೆಯುತ್ತಿದ್ದೆ. ಪ್ರತಿಯೊಂದು ಕ್ಷಣ ಪ್ರತಿಯೊಂದು ನಿಮಿಷ ಹೇಗಿತ್ತು ಎಂದು ನಾನು ಬರೆಯುತ್ತಿದ್ದೆ, ನನ್ನ ಭಾವನೆಗಳನ್ನು ವ್ಯಕ್ತ ಪಡಿಸುತ್ತಿದ್ದೆ. ಇದನ್ನು ಪುಸ್ತಕವಾಗಿ ಕನ್ವರ್ಟ್ ಮಾಡಬೇಕು ಎನ್ನುವುದು ನನ್ನ ಆಸೆ. ಆಗಿದೆ. ಓದಲು ತುಂಬಾ ಇಂಟ್ರೆಸ್ಟಿಂಗ್ ಆಗಿರುತ್ತದೆ. 100% ಸತ್ಯ ಅದರಲ್ಲಿ ಇರುತ್ತದೆ. ನಾನು ಇಷ್ಟು ದಿನಗಳ ಕಾಲ ಮೌನವಾಗಿದ್ದೆ ಅಂದರೆ ಅದಕ್ಕೊಂದು ಕಾರಣ ಇದೆ ಶೀಘ್ರದಲ್ಲಿ ಕಾರಣ ತಿಳಿಯಲಿದೆ ಎಂದು ರಾಗಿಣಿ ಹೇಳಿದ್ದಾರೆ.

ನನಗೆ ಚಿತ್ರರಂಗದಲ್ಲಿ ಯಾವುದೇ ಗಾಡ್‌ಫಾದರ್ ಇರಲಿಲ್ಲ. ಈ ರಂಗಕ್ಕೆ ಬಂದು 15 ವರ್ಷಗಳು ಕಳೆದವು. ಇಲ್ಲಿಯವರೆಗೆ 40ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದೇನೆ. ಇಲ್ಲಿಗೆ ಬಂದಿದ್ದೇ ಆಕಸ್ಮಿಕ. ನಾನು ಸೋಲೊ ಸಿನಿಮಾ ಮಾಡಲು ಆರಂಭಿಸಿದಾಗ ಅನೇಕ ನಟರಿಗೆ ಅಭದ್ರ ಫೀಲ್ ಆಯ್ತು. ನನ್ನ ನಿರ್ಮಾಪಕರಿಗೆ ಕರೆ ಮಾಡಿದ ಅನೇಕರು ಪ್ರಶ್ನೆ ಮಾಡಿದ್ದಾರೆ. ಯಾಕೆ ನೀವು ಮಹಿಳಾ ಪ್ರಧಾನ ಸಿನಿಮಾ ಮಾಡುತ್ತಿರುವುದು? ಈ ನಾಯಕಿಯನ್ನು ಯಾಕಿ ಪ್ರಧಾನವಾಗಿ ತೋರಿಸುತ್ತಿರುವುದು ಎಂದು ಪ್ರಶ್ನಿಸಿದ್ದಾರೆ. ಅವರ ಮಾತುಗಳನ್ನು ಕೇಳಿ ಮತ್ತಷ್ಟು ಬೆಳೆಯಬೇಕು ಅನಿಸುತ್ತದೆ ಎಂದು ರಾಗಿಣಿ ಹೇಳಿದ್ದಾರೆ.

ರಾಗಿಣಿ ದ್ವಿವೇದಿ ಸದ್ಯ ‘ಬಿಂಗೊ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.

ಈ ಹಿಂದೆ ಡ್ರಗ್ಸ್‌ ಪ್ರಕರಣ ಸಂಬಂಧ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಅವರನ್ನು ಬಂಧಿಸಲಾಗಿತ್ತು.
—–

Be the first to comment

Leave a Reply

Your email address will not be published. Required fields are marked *

Translate »
error: Content is protected !!