Nagathihalli: ಶ್ರೀಲಂಕಾದಲ್ಲಿ ‘ನಾಗತಿಹಳ್ಳಿ ಚಂದ್ರಶೇಖರ್ ಚಲನಚಿತ್ರೋತ್ಸವ’

ಶ್ರೀಲಂಕಾದ ಫಿಲಂ ಕಾರ್ಪೋರೇಶನ್, ಶ್ರೀಲಂಕಾ ಪ್ರವಾಸೋದ್ಯಮ ಇಲಾಖೆ, ಏಷ್ಯನ್ ಮೀಡಿಯಂ ಕಲ್ಚರಲ್ ಅಸೋಸಿಯೇಶನ್ ಮತ್ತು ಶ್ರೀಲಂಕಾದ ಭಾರತೀಯ ರಾಯಭಾರಿ ಕಚೇರಿ ಇವುಗಳ ಸಹಯೋಗದಲ್ಲಿ ಏಪ್ರಿಲ್ 27 ರಿಂದ ಮೇ 3 ರವರೆಗೆ ಶ್ರೀಲಂಕಾದಲ್ಲಿ ಅದ್ದೂರಿಯಾದ ನಾಗತಿಹಳ್ಳಿ ಚಂದ್ರಶೇಖರ್ ಚಲನಚಿತ್ರೋತ್ಸವ ನಡೆಯಲಿದೆ.

ಈ ವೇಳೆ ಚಲನಚಿತ್ರ ಕಾರ್ಯಾಗಾರ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಕೂಡಾ ನಡೆಯಲಿವೆ. ನಿರ್ದೇಶಕ ಹಾಗೂ ಬರಹಗಾರ ನಾಗತಿಹಳ್ಳಿ ಚಂದ್ರಶೇಖರ್​ ಅವರ ಪ್ರಶಸ್ತಿ ಪುರಸ್ಕೃತ ಹಾಗೂ ಮಹತ್ವದ ಚಿತ್ರಗಳಾದ ಅಮೆರಿಕ ಅಮೆರಿಕ, ಮಾತಾಡ್ ಮಾತಾಡ್ ಮಲ್ಲಿಗೆ, ಕೋಟ್ರೇಶಿ ಕನಸು, ಇಷ್ಟಕಾಮ್ಯ ಚಿತ್ರಗಳು ಅಲ್ಲಿ ಪ್ರದರ್ಶನಗೊಳ್ಳಲಿವೆ.

ಕಥಾ ನಿರೂಪಣೆ, ಚಿತ್ರಕಥೆ ರಚನೆ, ಛಾಯಾಗ್ರಹಣ, ಸಂಕಲನ ಮುಂತಾದ ವಿಷಯಗಳ ಬಗ್ಗೆ ಶ್ರೀಲಂಕಾದ ಸಿನಿಮಾಸಕ್ತ ವಿದ್ಯಾರ್ಥಿಗಳೊಂದಿಗೆ ಕಾರ್ಯಾಗಾರವನ್ನು ನಾಗತಿಹಳ್ಳಿ ಚಂದ್ರಶೇಖರ್​ ಅವರು ನಡೆಸಿಕೊಡಲಿದ್ದಾರೆ.

ಈ ಚಿತ್ರೋತ್ಸವದಲ್ಲಿ ನಾಗತಿಹಳ್ಳಿ ಅವರೊಟ್ಟಿಗೆ ನಟ ನಿರೂಪ್ ಭಂಡಾರಿ, ನಟಿ ಕಾವ್ಯಾ ಶೆಟ್ಟಿ, ಛಾಯಾಗ್ರಾಹಕ ಎಸ್. ಕೆ. ರಾವ್, ನಿರ್ಮಾಪಕ ವೈ.ಎನ್ ಶಂಕರೇಗೌಡ ಮತ್ತು ಮಾಧ್ಯಮ ಕ್ಷೇತ್ರದ ಮದನ್‌ಗೌಡ, ಜಿ.ಎನ್ ಮೋಹನ್ ಭಾಗವಹಿಸಲಿದ್ದಾರೆ.

ಅಮೆರಿಕ…ಅಮೆರಿಕ ಸಿನಿಮಾ ಬಿಡುಗಡೆಯಾಗಿ ಬರೋಬ್ಬರಿ 25 ವರ್ಷ ಕಳೆದಿದೆ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸಿದ್ದ ಹಾಗೂ ರಮೇಶ್​ ಅರವಿಂದ್​, ಅಕ್ಷಯ್​ ಆನಂದ್​, ಹೇಮಾ ಪಂಚಮುಖಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ ತ್ರಿಕೋನ ಪ್ರೇಮ ಕಥೆ ಭಾರತ ಹಾಗೂ ಅಮೆರಿಕ ಸಂಸ್ಕೃತಿಯನ್ನು ಎತ್ತಿ ಹಿಡಿದ ಎವರ್​ಗ್ರೀನ್​ ಸಿನಿಮಾ ಆಗಿದೆ. ಈ ಚಿತ್ರ 5 ಕೋಟಿಗೂ ಹೆಚ್ಚು ಕಲೆಕ್ಷನ್​ ಮಾಡಿ, ಹಲವು ಚಿತ್ರಮಂದಿರಗಳಲ್ಲಿ ಒಂದು ವರ್ಷಗಳ ಪ್ರದರ್ಶನ ಕಂಡಿತ್ತು. ಶ್ರೀಲಂಕಾದಲ್ಲೂ ಈ ಚಿತ್ರ ಪ್ರದರ್ಶನ ಕಾಣಲಿದೆ.
—–

Be the first to comment

Leave a Reply

Your email address will not be published. Required fields are marked *

Translate »
error: Content is protected !!