ಯುವ ಪ್ರತಿಭೆ ಅಭಿಲಾಶ್ ನಾಯಕನಾಗಿ ಹಾಗೂ ಸೋನಲ್ ಮೊಂಥೆರೋ ನಾಯಕಿಯಾಗಿ ನಟಿಸುತ್ತಿರುವ ಮಾರ್ಗರೇಟ್ ಲವರ್ ಆಫ್ ರಾಮಾಚಾರಿ ಚಿತ್ರದ ಮುಹೂರ್ತ ಸಮಾರಂಭವಿಂದು ಬೆಂಗಳೂರಿನ ಬಂಡೇ ಮಹಾಕಾಳಿ ಸನ್ನಿಧಿಯಲ್ಲಿ ನೆರವೇರಿತು.
ನಟರಾಕ್ಷಸ ಡಾಲಿ ಧನಂಜಯ್ ಹೊಸ ತಂಡಕ್ಕೆ ಶುಭ ಹಾರೈಸಿದರು. ಡಾಲಿ ಧನಂಜಯ್ ಮಾತನಾಡಿ, ಅಭಿ ಬಡವ ರಾಸ್ಕಲ್, ಹೊಯ್ಸಳದಲ್ಲಿ ಸಣ್ಣ ಪಾತ್ರ ಮಾಡಿದ್ದಾನೆ. ಆತ ಅಭಿಮಾನಿಯಾಗಿ ಪರಿಚಯ. ಈಗ ಹೀರೋ ಆಗುತ್ತಿದ್ದಾನೆ. ಸುಮಾರು ವರ್ಷಗಳ ಪ್ರಯತ್ನ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ತಿಳಿಸಿದರು.
ನಿರ್ದೇಶಕ ಗಿರಿಧರ್ ಕುಂಬಾರ್ ಮಾತನಾಡಿ, ಈ ಚಿತ್ರದ ಮೂಲಕ ಇವತ್ತಿನ ಸಮಾಜಕ್ಕೆ ಬೇಕಿರುವ ಸಂದೇಶ ಕೊಡುತ್ತೇವೆ. ನಾಗರಹಾವು ಸಿನಿಮಾದ ಪಾತ್ರಗಳು ಲೆಜೆಂಡ್ ಪಾತ್ರಗಳು. ಅವುಗಳನ್ನು ನಾವು ಮುಟ್ಟಲಾಗುವುದಿಲ್ಲ. ಒಬ್ಬ ಸಾಮಾನ್ಯ ಹುಡುಗನಿಗೆ ಶ್ರೀಮಂತ ಹುಡುಗಿ ಸಿಕ್ಕಾಗ ಏನಾಗುತ್ತದೆ ಅನ್ನೋದೆ ಕಥೆ. ಮೇ 15ರಂದು ಶೂಟಿಂಗ್ ಶುರುವಾಗಲಿದೆ ಎಂದರು.
ನಿರ್ಮಾಪಕರಾದ ಹರೀಶ್ ಮಾತಾನಾಡಿ, ಬಹಳ ಸಂತೋಷ ಆಗಿದೆ. ಧನಂಜಯ್ ಅಣ್ಣ ಬಂದಿರುವುದು ಖುಷಿಕೊಟ್ಟಿದೆ. ಅವರು ಯುವಕರಿಗೆ ಎಷ್ಟು ಪ್ರೇರಣೆ ಕೊಡುತ್ತಾರೆ ಎಂದರೆ ನಿಜ ಬೆಲೆ ಕಟ್ಟಲು ಆಗುವುದಿಲ್ಲ. ಎಲ್ಲವೂ ಹೊಸಮುಖ. ಧನಂಜಯ್ ಅಣ್ಣ, ಸುರೇಶ್ ಅಣ್ಣ, ಅಜಯ್ ಅಣ್ಣ ಮಾರ್ಗದರ್ಶನದಲ್ಲಿ ಹೋಗುತ್ತೇವೆ. ಒಳ್ಳೆ ಯುವಕರಿದ್ದಾರೆ. ಅವರ ಭವಿಷ್ಯ ಈ ಚಿತ್ರದಲ್ಲಿದೆ. ಈ ಸಿನಿಮಾ ಮೇಲೆ ನಿಮ್ಮ ಆಶೀರ್ವಾದ ಇರಲಿ ಎಂದರು.
ನಟ ಅಭಿಲಾಷ್, ತುಂಬಾ ಎಮೋಷನಲ್ ಮೂಮೆಂಟ್. ಇವತ್ತು ಕಷ್ಟಪಟ್ಟು ಇಲ್ಲಿ ಕೂತಿದ್ದೇನೆ. ಇದಕ್ಕೆ ಮೂಲ ಕಾರಣ ನಿರ್ಮಾಪಕರು. ನನ್ನ ಒದ್ದಾಟಗಳನ್ನು ಬಹಳ ಹತ್ತಿರದಿದ್ದ ನೋಡಿದ್ದಾರೆ. ಇವರೇ ನನ್ನ ಅನ್ನದಾತರು. ಧನಂಜಯ್ ಅಣ್ಣ ಹೇಳಿಕೊಟ್ಟ ಮಾರ್ಗದರ್ಶನಲ್ಲಿ ನಾನು ನಡೆಯುತ್ತಿದ್ದೇವೆ. ಈಗ ಅವರು ನನ್ನ ಚಿತ್ರಕ್ಕೆ ಹಾರೈಸಿರುವುದು ಖುಷಿಕೊಟ್ಟಿದೆ ಎಂದರು. ಸೋನಲ್ ಮೊಂಥೆರೋ, ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.
Be the first to comment