ಹ್ಯಾಟ್ರಿಕ್ ಹೀರೋ ಶಿವ ರಾಜ್ಕುಮಾರ್ ತಮ್ಮ ಸಿನಿಮಾದ ‘ರೋಸಿ 45’ ಟೈಟಲ್ ನ್ನು ಲೂಸ್ ಮಾದ ಯೋಗಿ ಅವರ 50ನೇ ಚಿತ್ರಕ್ಕೆ ಬಿಟ್ಟು ಕೊಟ್ಟಿದ್ದಾರೆ.
ಲೂಸ್ ಮಾದ ಯೋಗಿ ನಟಿಸುತ್ತಿರುವ 50 ನೇ ಸಿನಿಮಾ ಇತ್ತೀಚೆಗೆ ಸೆಟ್ಟೇರಿತ್ತು. ಡಾಲಿ ಧನಂಜಯ್ ಈ ಸಿನಿಮಾದ ಟೈಟಲ್ ಲಾಂಚ್ ಮಾಡಿದ್ದರು. ಈ ಚಿತ್ರಕ್ಕೆ ‘ರೋಸಿ’ ಅಂತ ಟೈಟಲ್ ಇಡಲಾಗಿದೆ. ಆದರೆ, ಇದೀಗ ಶೀರ್ಷಿಕೆ ವಿವಾದಕ್ಕೆ ಸಿಲುಕಿತ್ತು.
ಹ್ಯಾಟ್ರಿಕ್ ಹೀರೋ ಶಿವ ರಾಜ್ಕುಮಾರ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಮೊದಲ ಬಾರಿಗೆ ಅರ್ಜುನ್ ಜನ್ಯ ಅವರು ನಿರ್ದೇಶಿಸುತ್ತಿರುವ ಚಿತ್ರಕ್ಕೆ ‘ರೋಸಿ 45’ ಎಂದು ನಾಮಕರಣ ಮಾಡಲಾಗಿತ್ತು. ಈ ಚಿತ್ರವನ್ನು ರಮೇಶ್ ರೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ. ನಿರ್ಮಾಪಕ ರಮೇಶ್ ರೆಡ್ಡಿ ಅವರು ಈ ವಿಷಯವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರ ಗಮನಕ್ಕೆ ತಂದಿದ್ದರು. ಈಗ ಸಮಸ್ಯೆಯನ್ನು ನಟ ಶಿವ ರಾಜ್ಕುಮಾರ್ ಬಗೆ ಹರಿಸಿದ್ದಾರೆ.
ಟೈಟಲ್ ವಿಚಾರವಾಗಿ ನಟ ಲೂಸ್ ಮಾದ ಯೋಗಿ ಹಾಗೂ ನಿರ್ದೇಶಕ ಶೂನ್ಯ, ಶಿವರಾಜ್ಕುಮಾರ್ ಅವರ ಬಳಿ ಹೋಗಿ ಈ ಸಿನಿಮಾದ ಟೈಟಲ್ ನಮ್ಮ ಚಿತ್ರದ ಕಥೆಗೆ ಸೂಕ್ತವಾಗಿದೆ. ಅದಕ್ಕೆ ಈ ಟೈಟಲ್ ಅನ್ನು ನಮಗೆ ಬಿಟ್ಟು ಕೊಡಿ ಎಂದು ಕೇಳಿದ್ದರು. ಅದಕ್ಕೆ ಶಿವ ರಾಜ್ಕುಮಾರ್ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದು ಲೂಸ್ ಮಾದ ಯೋಗಿ ಸೇರಿದಂತೆ ಇಡೀ ಚಿತ್ರತಂಡಕ್ಕೆ ಸಂತೋಷ ಉಂಟು ಮಾಡಿದೆ.
ಅರ್ಜುನ್ ಜನ್ಯ ನಿರ್ದೇಶನದ ಚೊಚ್ಚಲ ಸಿನಿಮಾದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್, ರಿಯಲ್ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಸಿನಿಮಾಗೆ ರೋಸಿ 45 ಅಂತಾ ಟೈಟಲ್ ಇಡಲಾಗಿತ್ತು. ಈಗ ಶಿವರಾಜ್ ಕುಮಾರ್ ರೋಸಿ ಟೈಟಲ್ ಲೂಸ್ ಮಾದ ಯೋಗಿಗೆ ಬಿಟ್ಟು ಕೊಟ್ಟಿರುವುದರಿಂದ ಈ ಚಿತ್ರಕ್ಕೆ ಯಾವ ಟೈಟಲ್ ಇಡಲಾಗುವುದು ಎಂದು ಕಾದು ನೋಡಬೇಕಿದೆ.
—–
Be the first to comment