Salman: ಆನ್ ಲೈನ್‌ ನಲ್ಲಿ ಸೋರಿಕೆ ಆಯ್ತು ಸಲ್ಮಾನ್‌ ಚಿತ್ರ

ಸಲ್ಮಾನ್ ಖಾನ್ ಅಭಿನಯದ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರ ತೆರೆಕಂಡ ದಿನವೇ ಆನ್​ಲೈನ್​ನಲ್ಲಿ ಸೋರಿಕೆ ಆಗಿ ಚಿತ್ರಕ್ಕೆ ಶಾಕ್‌ ನೀಡಿದೆ.

ಸಾಮಾಜಿಕ ಜಾಲತಾಣ ಬಳಕೆದಾರರು ಕಿಸಿ ಕಾ ಭಾಯಿ ಕಿಸಿ ಕಿ ಜಾನ್ ಫ್ರೀ ಡೌನ್‌ಲೋಡ್, ಕಿಸಿ ಕಾ ಭಾಯಿ ಕಿಸಿ ಕಿ ಜಾನ್ ಟೆಲಿಗ್ರಾಮ್ ಲಿಂಕ್, ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಎಂಪಿ4 ಹೆಚ್​ಡಿ ಡೌನ್‌ಲೋಡ್, ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ತಮಿಳು ರಾಕರ್ಸ್ ಸೇರಿದಂತೆ ಮುಂತಾದ ಕೀವರ್ಡ್‌ಗಳನ್ನು ಬಳಸಿಕೊಂಡು ಚಲನಚಿತ್ರವನ್ನು ಹುಡುಕುತ್ತಿದ್ದಾರೆ ಎನ್ನಲಾಗಿದೆ.

ಚಿತ್ರ ಸೋರಿಕೆಯಾಗಿದ್ದರೂ ಪೈರೆಟ್‌ ಚಲನಚಿತ್ರಗಳನ್ನು ನೋಡಬಾರದು. ಥಿಯೇಟರ್‌ಗಳಲ್ಲಿ ಚಲನಚಿತ್ರವನ್ನು ವೀಕ್ಷಿಸಲು ಅಥವಾ ಅಧಿಕೃತ ಒಟಿಟಿ ಸೇವೆಗಳಲ್ಲಿ ಲಭ್ಯವಾದಾಗ ವೀಕ್ಷಿಸಬೇಕು ಎಂಬುದು ಚಿತ್ರತಂಡ ಮನವಿ ಮಾಡಿದೆ.

ಸಿನಿಮಾವೊಂದು ಆನ್‌ಲೈನ್‌ನಲ್ಲಿ ಸೋರಿಕೆಯಾಗುತ್ತಿರುವುದು ಇದೇ ಮೊದಲಲ್ಲ. ಸರ್, ಶೆಹಜಾದ, Ant -Man and the Wasp: Quantumania, ಮಿಸಸ್​ ಚಟರ್ಜಿ ವರ್ಸಸ್ ನಾರ್ವೆ, ಸೆಲ್ಫಿ ಚಿತ್ರಗಳೂ ಸೋರಿಕೆ ಆಗಿದ್ದವು.

ಫರ್ಹಾದ್ ಸಾಮ್ಜಿ ನಿರ್ದೇಶನದ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಚಿತ್ರದಲ್ಲಿ ಸಲ್ಮಾನ್ ಖಾನ್​ ಮತ್ತು ಪೂಜಾ ಹೆಗ್ಡೆ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಪಲಕ್ ತಿವಾರಿ, ವೆಂಕಟೇಶ್ ದಗ್ಗುಬಾಟಿ, ಶೆಹನಾಜ್ ಗಿಲ್, ರಾಘವ್ ಜುಯಲ್, ಸಿದ್ಧಾರ್ಥ್ ನಿಗಮ್, ಜಸ್ಸಿ ಗಿಲ್, ಜಗಪತಿ ಬಾಬು ಕೂಡ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
—–

Be the first to comment

Leave a Reply

Your email address will not be published. Required fields are marked *

Translate »
error: Content is protected !!