KGF3: ಕೆಜಿಎಫ್ 3 ಬರುತ್ತದೆ ಎಂದ ರವೀನಾ

ಕೆಜಿಎಫ್ 3 ಬರುವ ಸುಳಿವನ್ನು ಬಾಲಿವುಡ್‌ ನಟಿ ರವೀನಾ ಟಂಡನ್ ನೀಡಿದ್ದಾರೆ.

ಕೆಜಿಎಫ್ 2 ಸಿನಿಮಾ ರಿಲೀಸ್ ಆಗಿ ಒಂದು ವರ್ಷ ಕಳೆದ ಹಿನ್ನೆಲೆಯಲ್ಲಿ ಇತ್ತೀಚಿಗಷ್ಟೇ ಹೊಂಬಾಳೆ ಫಿಲ್ಮ್ಸ್ ‘ಕೆಜಿಎಫ್ 3’ ಮಾಡುವ ಬಗ್ಗೆ ಸುಳಿವು ನೀಡಿತ್ತು. ಈ ಬೆನ್ನಲ್ಲೇ ‘ಕೆಜಿಎಫ್ 3’ಗೆ ರೆಡಿಯಾಗಿ ಎಂದು ಯಶ್ ಹೇಳಿರುವುದನ್ನು ರವೀನಾ ಟಂಡನ್ ಉಲ್ಲೇಖಿಸಿದ್ದಾರೆ.

ಕೆಜಿಎಫ್ 2 ಮೊದಲ ವಾರ್ಷಿಕೋತ್ಸವದ ದಿನ ಮೊದಲು ವಿಶ್ ಮಾಡಿದ್ದು, ಯಶ್ ಪತ್ನಿ ರಾಧಿಕಾ ಪಂಡಿತ್ ಎಂದು ರವೀನಾ ಟಂಡನ್ ಹೇಳಿದ್ದಾರೆ. ಏಪ್ರಿಲ್ 14ರ ಬೆಳಗ್ಗೆಯೇ ಯಶ್ ಪತ್ನಿ ರಾಧಿಕಾ ಪಂಡಿತ್ ವಿಶ್ ಮಾಡಿದ್ದರು. ಅದೇ ದಿನ ಸಂಜೆ ಯಶ್ ಫೋನ್ ಮಾಡಿದ ವಿಚಾರವನ್ನು ರವೀನಾ ಟಂಡನ್ ಹಂಚಿಕೊಂಡಿದ್ದಾರೆ.

ಏ.14 ರಂದು ಯಶ್ ನನಗೆ ಫೋನ್ ಮಾಡಿದ್ದರು. ನಾವಿಬ್ಬರೂ ವಾರ್ಷಿಕೋತ್ಸವಕ್ಕೆ ಒಬ್ಬರಿಗೊಬ್ಬರು ವಿಶ್ ಮಾಡಿಕೊಂಡೆವು. ಆಗ ಯಶ್ ಕೆಜಿಎಫ್ 3ಗೆ ರೆಡಿಯಾಗಬೇಕು ಅಂತ ಹೇಳಿದರು. ಆಗ ಮೊದಲ ಸೀನ್‌ನಲ್ಲೇ ನನ್ನನ್ನು ಸಾಯಿಸಬೇಡಿ ಅಂತ ಹೇಳಿದೆ. ಹೀಗೆ ಜೋಕ್ ಮಾಡಿಕೊಂಡೆ ನಕ್ಕೆವು ಎಂದಿದ್ದಾರೆ ರವೀನಾ.

ಹಾಗೇ ಪ್ರಶಾಂತ್ ಕೂಡ ಫೋನ್ ಮಾಡಿದ್ದರು. ಆದರೆ, ಕೆಜಿಎಫ್ -3 ಯಾವಾಗ ಬರುತ್ತೆ ಅನ್ನೋದು ನಮಗೆ ಗೊತ್ತಿಲ್ಲ. ನಾವೆಲ್ಲರೂ ಬೇಗ ಬರಲಿ ಅಂತ ಕಾಯುತ್ತಿದ್ದೇವೆ. ಪ್ರಶಾಂತ್ ನೀಲ್ ಫೋನ್ ಮಾಡಿ ಪ್ರತಿ ದೃಶ್ಯದಲ್ಲೂ ಅದ್ಭುತವಾಗಿ ಮಾಡಿದ್ದೀರಿ ಎಂದು ಹೇಳಿದ್ದರು. ಪ್ರಶಾಂತ್ ನೀಲ್ ಕೂಡ ಆದಷ್ಟು ಬೇಗ ಸಿನಿಮಾ ಮಾಡೋಣ ಅಂತ ಹೇಳಿದರು ಎಂದು ರವೀನಾ ಟಂಡನ್ ಹೇಳಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್, ಕೆಜಿಎಫ್ 2 ಸೂಪರ್ ಹಿಟ್ ಆಗಿದೆ. ಕೆಜಿಎಫ್ 2 ಬಾಕ್ಸ್ ಆಫೀಸ್ ನಲ್ಲಿ ೧,೨೦೦ ಕೋಟಿ ಕಲೆಕ್ಷನ್ ಮಾಡಿದೆ. ಕೆಜಿಎಫ್ 3 ನಿರ್ಮಾಣಕ್ಕೆ ಚಿತ್ರಪ್ರೇಮಿಗಳು ಕಾಯುತ್ತಿದ್ದಾರೆ.
—–

Be the first to comment

Leave a Reply

Your email address will not be published. Required fields are marked *

Translate »
error: Content is protected !!