ಗಾಂಜಾ ಕೃಷಿಯನ್ನು ಕಾನೂನುಬದ್ಧಗೊಳಿಸುವಂತೆ ನಟ ಚೇತನ್ ಅವರು ವಿವಾದಾತ್ಮಕ ಮನವಿ ಮಾಡಿದ್ದಾರೆ.
ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖವಿಂದರ್ ಸುಖು ಅವರು ಗಾಂಜಾ ಕೃಷಿಯನ್ನು ಕಾನೂನುಬದ್ಧಗೊಳಿಸಲು ಯೋಚಿಸಿರುವುದನ್ನು ಚೇತನ್ ಬೆಂಬಲಿಸಿದ್ದಾರೆ.
ಈ ಕುರಿತು ಫೇಸ್ ಬುಕ್ ನಲ್ಲಿ ಬರೆದಿರುವ ಚೇತನ್, ‘ಗಾಂಜಾ ಕೃಷಿಯು ರಾಜ್ಯದ ಆದಾಯವನ್ನು ಹೇಗೆ ಹೆಚ್ಚಿಸುತ್ತದೆ ಮತ್ತು ರೋಗಿಗಳಿಗೆ ಔಷಧೀಯ ಪ್ರಯೋಜನಗಳನ್ನು ಹೇಗೆ ಒದಗಿಸುತ್ತದೆ ಎಂಬುದನ್ನು 5 ಸದಸ್ಯ ಸಮಿತಿಯೊಂದು ಅಧ್ಯಯನ ಮಾಡುತ್ತದೆ. ಉತ್ತರಾಖಂಡ, ಗುಜರಾತ್, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಕರ್ನಾಟಕವೂ ಗಾಂಜಾ ಕೃಷಿಯನ್ನು ಕಾನೂನುಬದ್ಧಗೊಳಿಸುವತ್ತ ಗಮನ ಹರಿಸಬೇಕು’ ಎಂದಿದ್ದಾರೆ.
ಈ ಹಿಂದೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ನಟ ರಾಕೇಶ್ ಅಡಿಗ ಗಾಂಜಾವನ್ನು ಕಾನೂನು ಬದ್ಧಗೊಳಿಸಿಸುವಂತೆ ಕೇಳಿಕೊಂಡಿದ್ದರು. ಈಗ ಚೇತನ್ ಈ ಬಗ್ಗೆ ಒತ್ತಾಯ ಮಾಡಿದ್ದಾರೆ.
ಹಲವು ವರ್ಷಗಳಿಂದ ಗಾಂಜಾ ಬೆಳೆಯುವ ಕುರಿತಾಗಿ ಪರ, ವಿರೋಧ ಚರ್ಚೆಗಳು ಕೇಳಿ ಬರುತ್ತಿವೆ.
——
Be the first to comment