ಜನಪ್ರಿಯ ನಟಿ ಖುಷ್ಭೂ ಹಲವು ವರ್ಷಗಳ ಬಳಿಕ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರಿಗೆ ಜೋಡಿ ಆಗಿ ನಟಿಸಲಿದ್ದಾರೆ.
2011ರಲ್ಲಿ ತೆರೆಕಂಡ ನಾನಲ್ಲ ಸಿನಿಮಾದ ಬಳಿಕ ನಟಿ ಖುಷ್ಭೂ ಕನ್ನಡ ಚಿತ್ರಕ್ಕೆ ಬಂದಿರಲಿಲ್ಲ. ಈಗ 12 ವರ್ಷಗಳ ಬಳಿಕ ರವಿಚಂದ್ರನ್ ಅವರ ಜೊತೆ ನಟಿಸಲು ಸ್ಯಾಂಡಲ್ ವುಡ್ ಗೆ ಕಂಬ್ಯಾಕ್ ಮಾಡುತ್ತಿದ್ದಾರೆ.
ನಿರ್ದೇಶಕ ಗುರುರಾಜ್ ಕುಲಕರ್ಣಿ ರವಿಚಂದ್ರನ್ ಗಾಗಿ ಸಿನಿಮಾವೊಂದನ್ನು ಮಾಡುತ್ತಿದ್ದು, ಈ ಸಿನಿಮಾದ ನಾಯಕಿಯನ್ನಾಗಿ ಖುಷ್ಬೂ ಅವರನ್ನು ಆಯ್ಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಈಗಾಗಲೇ ಒಂದು ಸುತ್ತಿನ ಮಾತುಕತೆ ಕೂಡ ಆಗಿದೆ ಎನ್ನಲಾಗುತ್ತಿದೆ.
ಸದ್ಯ ಅನಾರೋಗ್ಯದ ಕಾರಣದಿಂದ ಖುಷ್ಭೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಸಿಗಲಿದೆ ಎನ್ನಲಾಗುತ್ತಿದೆ.
ರವಿಚಂದ್ರನ್ ಜೊತೆ ನಟಿಸಿ ಹಿಟ್ ಪೇರ್ ಅನಿಸಿಕೊಂಡಿರುವ ಖುಷ್ಭೂ, ರವಿಚಂದ್ರನ್ ಗಾಗಿ ಸಿನಿಮಾ ಒಪ್ಪಿಕೊಳ್ಳಬಹುದು ಎಂದು ನಿರೀಕ್ಷೆ ಮಾಡಲಾಗಿದೆ.
—–

Be the first to comment