ಡೆಮೊ ಪೀಸ್ ಚಿತ್ರದ ಮೂಲಕ ಸ್ಯಾಂಡಲ್ ವುಡ್’ಗೆ ಎಂಟ್ರಿ ಕೊಟ್ಟಿದ್ದ ಭರತ್ ಬೋಪಣ್ಣ ಈಗ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಇಂಡಿಯನ್, ದರ್ಬಾರ್ ಸೇರಿದಂತೆ ಹಲವು ಬ್ಲಾಕ್ ಬಸ್ಟರ್ ಹಿಟ್ ಚಿತ್ರಗಳನ್ನು ನಿರ್ಮಿಸಿರುವ ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ ‘ಮಿಷನ್: ಚಾಪ್ಟರ್ 1’ ಸಿನಿಮಾವನ್ನು ನಿರ್ಮಿಸಿದ್ದು ಈ ಚಿತ್ರದಲ್ಲಿ ಭರತ್ ಬೋಪಣ್ಣ ನಟಿಸಿದ್ದಾರೆ.
ತಲೈವಿ ವಿಜಯ್ ನಿರ್ದೇಶನದ, ಅರುಣ್ ವಿಜಯ್ ನಟನೆಯ ‘ಮಿಷನ್: ಚಾಪ್ಟರ್ 1’ ಚಿತ್ರದಲ್ಲಿ ಭರತ್ ಬೋಪಣ್ಣ ಖಳನಾಯಕನಾಗಿ ಮಿಂಚಿದ್ದಾರೆ.
ವಿಜಯ್ ಅವರ ಹಿಂದಿನ ಚಿತ್ರಕ್ಕೆ ಆಡಿಷನ್ ನೀಡಿದ್ದೆ. ಆದರೆ ಆಯ್ಕೆಯಾಗಿರಲಿಲ್ಲ. ಈ ಚಿತ್ರದಲ್ಲಿ ಪ್ರಮುಖ ಪಾತ್ರ ನೀಡಿದ್ದಾರೆ. ‘ಅಚ್ಚಂ ಎನ್ಬದು ಇಲ್ಲಯೇ’ ಎಂದು ಮೊದಲು ಚಿತ್ರಕ್ಕೆ ಶೀರ್ಷಿಕೆ ಇಡಲಾಗಿದೆ. ‘ಭಯ ಎನ್ನುವುದೇ ಇಲ್ಲ’ ಎಂದು ಇದರರ್ಥ ಎಂದು ಭರತ್ ಬೋಪಣ್ಣ ಹೇಳಿದ್ದಾರೆ.
ಈ ಚಿತ್ರದಲ್ಲಿ ಅರುಣ್ ವಿಜಯ್, ಆಯಮಿ ಜಾಕ್ಸನ್ ಮುಖ್ಯಭೂಮಿಕೆಯಲ್ಲಿ ಇದ್ದಾರೆ. ಮಲಯಾಳಂ ನಟಿ ನಿಮಿಷಾ ಸಜಯನ್ ನಟಿಸಿದ್ದಾರೆ ಎಂದು ಭರತ್ ತಿಳಿಸಿದ್ದಾರೆ.
ಗಿರಿಜಾ ಕಲ್ಯಾಣ, ರಾಧಾ ಕಲ್ಯಾಣ ಹಾಗೂ ಬ್ರಹ್ಮಗಂಟು ಧಾರವಾಹಿಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದ ಬಳಿಕ ಬೆಳ್ಳಿ ತೆರೆಗೆ ಭರತ್ ಬೋಪಣ್ಣಹೊರಳಿದ್ದರು.
——-
Be the first to comment