ಕರ್ನಾಟಕದ ಪ್ರಮುಖ ಕೌಶಲಭಿವೃದ್ಧಿ ಕೇಂದ್ರವಾದ ಬೆಂಗಳೂರಿನ ಕ್ಯಾಡ್ನೆಸ್ಟ್ (CADD Nest Bengaluru) ನ ಎರಡನೇ ವಾರ್ಷಿಕೋತ್ಸವ “ಪುನೀತ ನಮನ” ಹೆಸರಿನಲ್ಲಿ ನಡೆಯಿತು.
ವಾರ್ಷಿಕೋತ್ಸವ ಸಮಾರಂಭವನ್ನು ಕನ್ನಡದ ಪವರ್ಸ್ಟಾರ್ ಡಾ. ಪುನೀತ್ ರಾಜ್ ಕುಮಾರ್ ಅವರಿಗೆ ಅರ್ಪಿಸಲಾಯಿತು.
ಕ್ಯಾಡ್ನೆಸ್ಟ್ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರಾದ ಪ್ರಕಾಶ್ ಎಚ್.ಎಂ., ಸಿಇಒ ಜ್ಯೋತಿ ವಿ ಜೆ , ಎಸ್.ಕೆ. ಜೈನ್, ವೆಂಕಟರಾಮೇ ಗೌಡ, ನಮ್ಮ ಸೂಪರ್ ಸ್ಟಾರ್ ಹಾಗೂ ಸ್ಟಾರ್ ಕನ್ನಡದ ಸಿ ಇ ಓ ಅಸ್ಲಾಂ, ಡಾ.ವಸುಧಾ ಶ್ರೀನಿವಾಸ್, ಕಿರುತರೆ ನಟರಾದ ರೂಪೇಶ್, ಸಮಾಜಸೇವಕಿ ನಕ್ಷತ್ರ, ಸುಹೈಲ್, ಅರವಿಂದ್ ವಿವೇಕ್, ಚರಣ್ , ಗುರುಮೂರ್ತಿ ಮತ್ತಿತ್ತರರು ವಿಶೇಷ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
“ಕೌಶಲ ತರಬೇತಿ ಕ್ಷೇತ್ರದಲ್ಲಿ ಹಲವು ವರ್ಷಗಳ ಅನುಭವದಿಂದ ಎರಡು ವರ್ಷದ ಹಿಂದೆ ಯುಗಾದಿ ಹಬ್ಬದ ಸಮಯದಲ್ಲಿ ಆರಂಭಿಸಿದ ಕ್ಯಾಡ್ನೆಸ್ಟ್ ಇದೀಗ ಎರಡನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. ನಮ್ಮೆಲ್ಲರ ಪ್ರೀತಿಯ ಪುನೀತ್ ಸರ್ಗೆ ಈ ಕಾರ್ಯಕ್ರಮವನ್ನು ಅರ್ಪಿಸಿ “ಪುನೀತ ನಮನ” ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಿದ್ದೇವೆ. ಈಗಾಗಲೇ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹೆಸರಿನಲ್ಲಿ ಪವರ್ ಸ್ಟಾರ್ ಉದ್ಯೋಗ ಮೇಳವನ್ನು ಯಶಸ್ವಿಯಾಗಿ ನಡೆಸಿದ್ದೇವೆ ಎಂದು ಕ್ಯಾಡ್ನೆಸ್ಟ್ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರಾದ ಪ್ರಕಾಶ್ ಎಚ್.ಎಂ. ಹೇಳಿದರು.
“ನಮ್ಮ ಹಿಂದಿನ ಉಚಿತ ಪವರ್ ಸ್ಟಾರ್ ಉದ್ಯೋಗ ಮೇಳದಲ್ಲಿ ಸಾಕಷ್ಟು ಅಭ್ಯರ್ಥಿಗಳಿಗೆ ಪ್ಲೇಸ್ಮೆಂಟ್ ಆಗಿದೆ. ಬೆಂಗಳೂರಿನ ವಿದ್ಯಾರ್ಥಿಗಳು ನಮ್ಮ ಸಂಸ್ಥೆಯ ಕುರಿತು ಮೆಚ್ಚುಗೆಯ ಮಾತುಗಳನ್ನಾಡುವಾಗ ಸಂತೋಷವಾಗುತ್ತಿದೆ. ಇದೇ ಕಾರಣಕ್ಕೆ ಕ್ಯಾಡ್ನೆಸ್ಟ್ ವಾರ್ಷಿಕೋತ್ಸವವನ್ನು ಪುನೀತ ನಮನ ಹೆಸರಿನಲ್ಲಿ ಆಯೋಜಿಸಿದ್ದೇವೆ” ಎಂದು ಕ್ಯಾಡ್ನೆಸ್ಟ್ ಪ್ರೈವೇಟ್ ಲಿಮಿಟೆಡ್ನ ಸಿಇಒ ಜ್ಯೋತಿ ವಿಜೆ ಹೇಳಿದರು.
ಕ್ಯಾಡ್ನೆಸ್ಟ್ ಒಟ್ಟು ಎಂಟು ಬ್ರಾಂಚ್ ಗಳನ್ನು ಹೊಂದಿದೆ. ಬಸವನಗುಡಿ, ರಾಜಾಜಿನಗರ, ಶೇಷಾದ್ರಿಪುರಂ, ಮಲ್ಲೇಶ್ವರಂ, ಆರ್ ಆರ್ ನಗರ, ಆರ್ .ಟಿ ನಗರ, ಮಾಗಡಿ
ಮತ್ತು ಎಚ್ .ಬಿ. ಆರ್ ಲೇಔಟ್ ನಲ್ಲಿ ಕ್ಯಾಡ್ನೆಸ್ಟ್ ಸಂಸ್ಥೆ ಕೆಲಸ ಮಾಡುತ್ತಿದೆ.
_____
Be the first to comment