ಯುವ ಪ್ರತಿಭೆಗಳ “ಬಾ ನಲ್ಲೆ ಮದುವೆಗೆ” ಚಿತ್ರದ ಟೀಸರ್ ಮತ್ತು ಹಾಡುಗಳು ಬಿಡುಗಡೆ ಆಗಿವೆ.
ಟೀಸರ್ ಮತ್ತು ಐದು ಹಾಡುಗಳ ಬಿಡುಗಡೆ ಕಾರ್ಯಕ್ರಮ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು.
ಚಾಮರಾಜನಗರದ ಎಂ.ಯೋಗೇಶ್‌ನಂದನ್ ಸಿನಿಮಾಕ್ಕೆ ರಚನೆ,ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನ ಜತೆಗೆ ಭುಜಂಗೇಶ್ವರ ಉರುಕಾತೇಶ್ವರಿ ಮೂವೀಸ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.
ಹಳ್ಳಿ ಹುಡುಗನಾಗಿ ಅರ್ಜುನ್ ನಾಯಕ ನಟ ಆಗಿ ನಟಿಸಿದ್ದಾರೆ. ಮುಗ್ದೆಯಾಗಿ ಶೋಭಾ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಮೀಸೆಆಂಜನಪ್ಪ, ನಾಗೇಶ್‌ಮಯ್ಯಾ, ಮೈಸೂರು ಮಂಜುಳಾ,ಗೋವಿಂದಪ್ಪ ನಟಿಸಿದ್ದಾರೆ.
ಐದು ಹಾಡುಗಳಿಗೆ ದಿನೇಶ್‌ಕುಮಾರ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಪ್ರಸನ್ನಕುಮಾರ್, ಸಂಕಲನ ರಘು, ಸಾಹಸ ಕೌರವವೆಂಕಟೇಶ್, ನೃತ್ಯ ರಾಜ್‌ದೇವು ಅವರದಾಗಿದೆ.
ಚಾಮರಾಜನಗರ ಸುಂದರ ತಾಣಗಳು ಮತ್ತು ಸುವರ್ಣವತಿ ಡ್ಯಾಮ್ ಕಡೆಗಳಲ್ಲಿ 38 ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರವು ಪೋಸ್ಟ್ ಪ್ರೊಡಕ್ಷನ್‌ದಲ್ಲಿ ಬ್ಯುಸಿ ಇದ್ದು, ಸೆನ್ಸಾರ್ ಗೆ ಹೋಗಲು ತಯಾರಿ ಮಾಡಿಕೊಂಡಿದೆ.

___

Be the first to comment