Ramesh: ಕುತೂಹಲ ಮೂಡಿಸಿದ ಶಿವಾಜಿ ಸುರತ್ಕಲ್-2 ಟ್ರೈಲರ್

ಶಿವಾಜಿ ಸುರತ್ಕಲ್-2 ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಟ್ರೈಲರ್‌ ಪ್ರೇಕ್ಷಕರಿಗೆ ಶಾಕ್ ಕೊಟ್ಟಿದೆ.

ಚಿತ್ರದಲ್ಲಿ ರಮೇಶ್ ಅರವಿಂದ್ ಸ್ಪ್ಲಿಟ್ ಪರ್ಸನಾಲಿಟಿ ಇರುವ ಪಾತ್ರವನ್ನ ನಿರ್ವಹಿಸಿದ್ದಾರೆಯೇ ಅನ್ನುವ ಅನುಮಾನ ಮೂಡುತ್ತಿದೆ.

ಶಿವಾಜಿ ಸುರತ್ಕಲ್-2 ಚಿತ್ರದಲ್ಲಿ ಸಂಗೀತಾ ಶೃಂಗೇರಿ ಪಾತ್ರವೂ ಇದೆ. ಸ್ಪೆಷಲ್ ಹಾಡಲ್ಲಿ ಸಂಗೀತಾ ಕಾಣಿಸುತ್ತಾರೆ. ಆದರೆ ಇವರ ಪಾತ್ರ ಕೊಲೆ ಆಗುತ್ತದೆ ಎನ್ನುವ ವಿಷಯ ಟ್ರೈಲರ್‌ನಲ್ಲಿ ರಿವೀಲ್ ಆಗಿದೆ.

ಶಿವಾಜಿ ಸುರತ್ಕಲ್ ಸಿನಿಮಾದಲ್ಲೂ ನೆಗೆಟಿವ್ ರೋಲ್ ಇದೆ. ಅದನ್ನು ರಮೇಶ್ ಅರವಿಂದ್ ಅದ್ಭುತವಾಗಿ ನಿರ್ವಹಿಸಿದ್ದಾರೆ. ರಮೇಶ್ ಅರವಿಂದ್ ಅವರು ಈ ಚಿತ್ರದಲ್ಲಿ ಎರಡು ಪಾತ್ರ ಮಾಡಿದ್ದಾರೆ ಎಂದು ಟ್ರೈಲರ್ ನೋಡಿದಾಕ್ಷಣ ಗೊತ್ತಾಗುತ್ತದೆ.

ಶಿವಾಜಿ ಸುರತ್ಕಲ್-2 ಸಿನಿಮಾದಲ್ಲಿ ಜಾಸ್ತಿ ಥ್ರಿಲ್ಲಿಂಗ್ ಇದೆ ಅನಿಸುತ್ತಿದೆ. ಕೊಲೆಗಾರನ ಜಾಡು ಹಿಡಿದು ಹೊರಡುವ ಶಿವಾಜಿ ಸುರತ್ಕಲ್, ಕೊಲೆಗಡುಕನನ್ನು ಪತ್ತೆ ಹಚ್ಚಲು ಪರದಾಡುತ್ತಿದ್ದಾರೆ ಎಂದು ಅನಿಸುತ್ತದೆ.

ಶಿವಾಜಿ ಸುರತ್ಕಲ್-2 ಚಿತ್ರದ ಡೈರೆಕ್ಟರ್ ಆಕಾಶ್ ಶ್ರೀವತ್ಸ ಈ ಸಲ ಬೇರೆ ರೀತಿಯಲ್ಲಿಯೇ ಕಥೆ ಹೇಳುತ್ತಿದ್ದಾರೆ ಎಂದು ಅನಿಸುತ್ತದೆ. ಏಪ್ರಿಲ್-14 ರಂದು ಸಿನಿಮಾ ರಿಲೀಸ್ ಆಗುತ್ತಿದೆ.
—–

Be the first to comment

Leave a Reply

Your email address will not be published. Required fields are marked *

Translate »
error: Content is protected !!