ranganayaka: ರಂಗನಾಯಕ ಫಸ್ಟ್ ಲುಕ್ ರಿಲೀಸ್

ನವರಸ ನಾಯಕ ಜಗ್ಗೇಶ್ ಅಭಿನಯದ ರಂಗನಾಯಕ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ.

ರಂಗನಾಯಕ ಸಿನಿಮಾದಲ್ಲಿ ನಾಯಕ ನಟ ಜಗ್ಗೇಶ್ ಅವರು ರಾಜನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ರಂಗನಾಯಕ ಚಿತ್ರದ ಚಿತ್ರೀಕರಣ ಈ ಹಿಂದೆನೆ ಪೂರ್ಣಗೊಂಡಿದೆ. ಈಗ ಚಿತ್ರದ ಪೋಸ್ಟ್ ಪ್ರೋಡಕ್ಷನ್ ಕೆಲಸ ನಡೆಯುತ್ತಿದೆ.

ಅತಿ ಶೀಘ್ರದಲ್ಲಿಯೇ ಚಿತ್ರದ ರಿಲೀಸ್ ಡೇಟ್ ಅನ್ನ ಕೂಡ ಅನೌನ್ಸ್ ಮಾಡೋದಾಗಿ ನಿರ್ಮಾಪಕ ವಿಖ್ಯಾತ ತಿಳಿಸಿದ್ದಾರೆ.

ರಂಗನಾಯಕ ಚಿತ್ರದಲ್ಲಿ 150 ಕ್ಕೂ ಹೆಚ್ಚು ವಿವಿಧ ಕಡೆಯ ರಂಗಭೂಮಿ ಕಲಾವಿದರು ಅಭಿನಯಿಸಿದ್ದಾರೆ. ಚಿತ್ರಕ್ಕಾಗಿಯೇ ಅದ್ಭುತ ಸೆಟ್‌ಗಳನ್ನೂ ಹಾಕಲಾಗಿತ್ತು. ಅರಮನೆಯ ಸೆಟ್‌ಗಳಲ್ಲಿ ಚಿತ್ರದ ಚಿತ್ರೀಕರಣ ಆಗಿದೆ.

ರಂಗನಾಯಕ ಚಿತ್ರದಲ್ಲಿ ಕನ್ನಡದ ನಟಿ ರಚಿತಾ ಮಹಾಲಕ್ಷ್ಮಿ ಜೋಡಿ ಆಗಿದ್ದಾರೆ. ಅವರಿಗೆ ಇದು ಮೊದಲ ಕನ್ನಡ ಸಿನಿಮಾ ಆಗಿದೆ.  ಈ ಹಿಂದೆ ತಮಿಳು ಸೀರಿಯಲ್ ನಲ್ಲಿ ಅಭಿನಯಿಸುವ ಮೂಲಕ ಹೆಸರು ಮಾಡಿದ್ದಾರೆ.

ರಂಗನಾಯಕ ಚಿತ್ರಕ್ಕೆ ಗುರುಪ್ರಸಾದ್ ನಿರ್ದೇಶನ ಇದೆ. ಮಠ ಮತ್ತು ಎದ್ದೇಳು ಮಂಜುನಾಥ ಚಿತ್ರದ ಬಳಿಕ ರಂಗನಾಯಕ ಚಿತ್ರಕ್ಕಾಗಿ ಈ ಜೋಡಿ ಒಂದಾಗಿದೆ.

——

Be the first to comment

Leave a Reply

Your email address will not be published. Required fields are marked *

Translate »
error: Content is protected !!