ವೀಕೆಂಡ್ ವಿತ್ ರಮೇಶ್ ಸೀಸನ್ 5ನ ಮೊದಲ ಅತಿಥಿಯಾಗಿ ಭಾಗವಹಿಸಿದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ, ಮುಂದಿನ ಬಾರಿ ಅಜ್ಜಿಯರಿಗಾಗಿ ಕನ್ನಡದಲ್ಲಿ ಮಾತನಾಡುತ್ತೇನೆ ಎಂದಿದ್ದಾರೆ.
ವೀಕೆಂಡ್ ವಿತ್ ರಮೇಶ್ ಸೀಸನ್ 5ನ ಮೊದಲ ಅತಿಥಿಯಾಗಿ ಭಾಗವಹಿಸಿದ್ದ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಶೋ ತುಂಬೆಲ್ಲಾ ಅವರು ಬಹುಪಾಲು ಇಂಗ್ಲಿಷ್ ನಲ್ಲಿ ಮಾತನಾಡಿದ್ದು ಇದಕ್ಕೆ ಕಾರಣ ಆಗಿದೆ.
ರಮ್ಯಾ ಮಾತನಾಡಿದ್ದು ಅಜ್ಜ-ಅಜ್ಜಿಯಂದಿರಿಗೆ ಅರ್ಥವಾಗಿಲ್ಲ, ಇದು ಕನ್ನಡದ ಶೋನ ಇಲ್ಲಾ ಇಂಗ್ಲಿಷ್ ಶೋನ ಅರ್ಥವಾಗುತ್ತಿಲ್ಲ ಎಂದು ಜನ ಟ್ರೋಲ್ ಮಾಡಿದ್ದರು.
ಮೀಮ್ ಒಂದಕ್ಕೆ ಪ್ರತಿಕ್ರಿಯಿಸಿರುವ ರಮ್ಯಾ ಮುಂದಿನ ಬಾರಿ ಎಲ್ಲಾ ಮುದ್ದಿನ ಅಜ್ಜಿಯಂದಿರಿಗಾಗಿ ಕನ್ನಡದಲ್ಲಿಯೇ ಮಾತನಾಡುತ್ತೇನೆ. ಕಾರ್ಯಕ್ರಮದ ಅತಿಥಿಗಳು ಬಹುತೇಕರು ಕನ್ನಡಿಗರಾಗಿದ್ದರು. ಅವರಿಗೆ ಅರ್ಥವಾಗಲು, ಎಲ್ಲರನ್ನೂ ಒಳಗೊಳ್ಳಲು ಇಂಗ್ಲಿಷ್ ನಲ್ಲಿ ಮಾತನಾಡಿದೆ ಅಷ್ಟೇ ಎಂದಿದ್ದಾರೆ.
ನಾವೆಲ್ಲರೂ ಪ್ರೀತಿ ಮತ್ತು ದಯೆಯಿಂದ ಭಾಷೆಯನ್ನು ಮಾತನಾಡೋಣ, ಹಂಚೋಣ ಎಂದು ರಮ್ಯಾ ಹೇಳಿದ್ದಾರೆ. ಅವರ ಪ್ರತಿಕ್ರಿಯೆ ವೈರಲ್ ಆಗಿದೆ.
Be the first to comment