ಏಕ್ ಲವ್ ಯಾ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ರೀಷ್ಮಾ ನಾಣಯ್ಯ, ಪ್ರೇಮ್ ಅವರ ಮುಂಬರುವ ಬಹುಭಾಷಾ ಚಿತ್ರ ‘ಕೆಡಿ – ದಿ ಡೆವಿಲ್’ ನಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.
ಕೆಡಿ ಸಿನಿಮಾದಲ್ಲಿ ಧ್ರುವ ಸರ್ಜಾ ನಾಯಕನಾಗಿ ನಟಿಸಿದ್ದಾರೆ. ಮೂಲಗಳ ಪ್ರಕಾರ, ಪ್ರೊಡಕ್ಷನ್ ಹೌಸ್ ಮತ್ತು ನಿರ್ದೇಶಕ ಪ್ರೇಮ್ ಅವರು ಚಿತ್ರಕ್ಕಾಗಿ ಕನ್ನಡದ ನಟಿಯನ್ನೇ ಆಯ್ಕೆ ಮಾಡುವ ಇಂಗಿತ ಹೊಂದಿದ್ದರು. ಈ ಹಿಂದೆ ಏಕ್ ಲವ್ ಯಾ ಚಿತ್ರದಲ್ಲಿ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದ ರೀಷ್ಮಾ ನಾಣಯ್ಯ ಅವರನ್ನೇ ಅಂತಿಮಗೊಳಿಸಿದ್ದಾರೆ ಎನ್ನಲಾಗಿದೆ.
ಏಕ್ ಲವ್ ಯಾ ಚಿತ್ರದ ಬಳಿಕ ರಾಣಾದಲ್ಲಿ ಕೆಲಸ ಮಾಡಿದ ರೀಷ್ಮಾ ನಾಣಯ್ಯ, ಗಣೇಶ್-ಪ್ರೀತಂ ಗುಬ್ಬಿ ಅವರ ಮುಂಬರುವ ಚಿತ್ರ ‘ಬಾನದಾರಿಯಲ್ಲಿ’ ಸಿನಿಮಾದಲ್ಲೂ ನಟಿಸಿದ್ದಾರೆ. ಈ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಉಪೇಂದ್ರ ಅವರ ನಿರ್ದೇಶನದ ‘UI’ ನಲ್ಲಿ ಸಹ ಕಾಣಿಸಿಕೊಳ್ಳಲಿದ್ದಾರೆ.
ಧ್ರುವ ಸರ್ಜಾ ಮತ್ತು ರೀಷ್ಮಾ ಅವರಲ್ಲದೆ, ಚಿತ್ರದಲ್ಲಿ ರವಿಚಂದ್ರನ್, ಸಂಜಯ್ ದತ್ ಮತ್ತು ಶಿಲ್ಪಾ ಶೆಟ್ಟಿ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
1968 ಮತ್ತು 1978ರ ನಡುವೆ ನಡೆದಿರುವ ನೈಜ ಘಟನೆಯನ್ನು ಆಧರಿಸಿದ ಕೆಡಿಯನ್ನು ಅದ್ದೂರಿಯಾಗಿ ಲಾಂಚ್ ಮಾಡಲಾಗಿದೆ. ಈ ದೊಡ್ಡ ಬಜೆಟ್ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಬೆಂಬಲಿಸುತ್ತಿದೆ. ಚಿತ್ರತಂಡ ಆ ಕಾಲದ ಬೆಂಗಳೂರಿನ ಸೆಟ್ ಮರುಸೃಷ್ಟಿಸುತ್ತಿದೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.
—-

Be the first to comment