ಪ್ರಕಾಶ್ ಬೆಳವಾಡಿ ವಿಭಿನ್ನಪಾತ್ರದಲ್ಲಿ ನಟಿಸಿರುವ “ಸಿಗ್ನಲ್ ಮ್ಯಾನ್” 1971″ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ.
ಹಿಂದೂಸ್ತಾನ್ ಮುಕ್ತ ಮೀಡಿಯಾ ಎಂಟರ್ ಟೇನರ್ಸ್ ಲಾಂಛನದಲ್ಲಿ ಗಣೇಶ್ ಪ್ರಭು ನಿರ್ಮಿಸಿರುವ ಚಿತ್ರಕ್ಕೆ ಕೆ.ಶಿವರುದ್ಯಯ್ಯ ನಿರ್ದೇಶನ ಇದೆ.
ಈ ಬಾರಿಯ 14 ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಏಷ್ಯನ್ ಚಿತ್ರಗಳ ವಿಭಾಗಕ್ಕೆ ಈ ಚಿತ್ರ ಆಯ್ಕೆಯಾಗಿದೆ. ಚಿತ್ರ ಮಾರ್ಚ್ 29 ರಂದು ಪ್ರದರ್ಶನವಾಗಲಿದೆ.
ಈ ಬಾರಿಯ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ನಮ್ಮ ಚಿತ್ರ ಪ್ರದರ್ಶನವಾಗುತ್ತಿದೆ. ಸದ್ಯದಲ್ಲೇ ತೆರೆಗೆ ಬರಲಿದೆ. ಉತ್ತಮ ತಂತ್ರಜ್ಞರ ಹಾಗೂ ಕಲಾವಿದರ ಸಹಕಾರದಿಂದ ನಮ್ಮ ಚಿತ್ರ ಅದ್ದೂರಿಯಾಗಿ ಬಂದಿದೆ. ಇದು ನನ್ನ ಹನ್ನೊಂದನೇ ನಿರ್ದೇಶನದ ಚಿತ್ರ ಎಂದು ನಿರ್ದೇಶಕ ಕೆ.ಶಿವರುದ್ರಯ್ಯ ಹೇಳಿದ್ದಾರೆ.
ನಾನು ಈ ಕಥೆಯನ್ನು ಭಾರತದ ಸೊಗಡಿಗೆ ತಕ್ಕ ಹಾಗೆ ಬರೆದಿದ್ದೇನೆ. ಊಟಿಯ ಬಳಿ ಹೆಚ್ಚು ಚಿತ್ರೀಕರಣ ನಡೆದಿದೆ. ಕೊಟ್ಟಿಗೆಹಾರ, ಚಿಕ್ಕಮಗಳೂರು, ಬೆಂಗಳೂರಿನಲ್ಲೂ ಚಿತ್ರೀಕರಣವಾಗಿದೆ. ಈ ಚಿತ್ರಕ್ಕಾಗಿ ಅದ್ದೂರಿ ಸೆಟ್ ನಿರ್ಮಿಸಲಾಗಿತ್ತು. ರೈಲು ಈ ಚಿತ್ರದ ಒಂದು ಭಾಗವಾಗಿತ್ತು. ಸಹ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ಸೊಗಸಾಗಿತ್ತು ಎಂದು ನಟ ಹಾಗೂ ಕಥೆಗಾರ ಪ್ರಕಾಶ್ ಬೆಳವಾಡಿ ತಿಳಿಸಿದ್ದಾರೆ.
ನಾನು ಉದ್ಯಮಿ. ಈ ಚಿತ್ರದ ಕಥೆ ಇಷ್ಟವಾಯಿತು ನಿರ್ಮಾಣಕ್ಕೆ ಮುಂದಾದೆ. ಮುಂದೆ ಸದಭಿರುಚಿ ಚಿತ್ರಗಳನ್ನು ನಿರ್ಮಿಸುವ ಆಸೆ ಇದೆ ಎಂದು ನಿರ್ಮಾಪಕ ಗಣೇಶ್ ಪ್ರಭು ಹೇಳಿದ್ದಾರೆ.
1971 ರ ಕಾಲಘಟ್ಟದಲ್ಲಿ ನಡೆಯುವ ಕಥೆ ಇದಾಗಿದೆ. ಭಾರತ – ಪಾಕ್ ಯುದ್ದದ ಭೀತಿ ದೇಶದೆಲ್ಲೆಡೆ ಇರುತ್ತದೆ. ಅಂತಹ ಸಮಯದಲ್ಲಿ ನಡೆಯುವ ಕಥೆ “ಸಿಗ್ನಲ್ ಮ್ಯಾನ್ 1971” ಆಗಿದೆ ಎಂದು ಚಿತ್ರತಂಡ ತಿಳಿಸಿದೆ.
—–
Be the first to comment