Darshan: ‘ಕಾಟೇರ’ ದಲ್ಲಿ ಬಹು ಆಯಾಮದ ಪಾತ್ರದಲ್ಲಿ ರಾಧನ ರಾಮ್

ದರ್ಶನ್ ಅಭಿನಯದ ‘ಕಾಟೇರ’ ಚಿತ್ರದಲ್ಲಿ ಬಹು ಆಯಾಮದ ಪಾತ್ರದಲ್ಲಿ ಮಾಲಾಶ್ರೀ ಪುತ್ರಿ ರಾಧನ ರಾಮ್ ನಟಿಸಲಿದ್ದಾರೆ.

ದರ್ಶನ್ ಅಭಿನಯದ ಆಯಕ್ಷನ್ ಕಮರ್ಷಿಯಲ್ ಎಂಟರ್ಟೈನರ್ ಮೂಲಕ ಮಾಲಾಶ್ರೀ ಅವರ ಪುತ್ರಿ ರಾಧನಾ ರಾಮ್ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಚಿತ್ರತಂಡ ಇತ್ತೀಚೆಗಷ್ಟೇ ನಾಯಕಿಯ ಫಸ್ಟ್ ಲುಕ್ ಅನ್ನು ಬಹಿರಂಗಪಡಿಸಿದೆ. ಅವರ ಪಾತ್ರದ ಹೆಸರು ಪ್ರಭಾವತಿ ಎಂದು ಮಾಹಿತಿ ಹಂಚಿಕೊಂಡಿದೆ.

ಫಸ್ಟ್ ಲುಕ್ಗೆ ನೀಡಿರುವ ಶೀರ್ಷಿಕೆಯಲ್ಲಿ, ‘ಒಂದು ಶಕ್ತಿಯುತ ಆತ್ಮ, ತನ್ನ ಬೆರಗುಗೊಳಿಸುವ ವರ್ತನೆಯಿಂದ ನಿಮ್ಮನ್ನು ಮೋಡಿ ಮಾಡುತ್ತದೆ. 70ರ ದಶಕದಲ್ಲಿ ಹಳ್ಳಿಯ ಹಿನ್ನೆಲೆಯ ಈ ಚಿತ್ರದಲ್ಲಿ ರಾಧನ ರಾಮ್ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ’ ಎಂದು ಬರೆಯಲಾಗಿದೆ.

‘ಕಾಟೇರ’ದಲ್ಲಿ ನಾಯಕಿಯ ಪಾತ್ರ ಬುದ್ಧಿವಂತ, ಧೈರ್ಯಶಾಲಿ ಮತ್ತು ಆಕರ್ಷಕ ಪಾತ್ರ ಎಂದು ಎಂದು ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಹೇಳಿದ್ದಾರೆ.

ಚಿತ್ರತಂಡ ಸೋಮವಾರದಿಂದ ಮುಂದಿನ ಚಿತ್ರೀಕರಣವನ್ನು ಪುನರಾರಂಭಿಸಲಿದೆ . ಮುಂದಿನ 25 ದಿನಗಳಲ್ಲಿ ಬೆಂಗಳೂರು ಮತ್ತು ಮೈಸೂರಿನಲ್ಲಿ ನಿರ್ಣಾಯಕ ಭಾಗಗಳನ್ನು ಪೂರ್ಣಗೊಳಿಸಲಿದೆ.

ಕಾಟೇರವನ್ನು ರಾಕ್ಲೈನ್ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ರಾಕ್ಲೈನ್ ವೆಂಕಟೇಶ್ ನಿರ್ಮಿಸಿದ್ದಾರೆ. ವಿ ಹರಿಕೃಷ್ಣ ಅವರ ಸಂಗೀತ ಮತ್ತು ಸುಧಾಕರ್ ಎಸ್ ರಾಜ್ ಅವರ ಛಾಯಾಗ್ರಹಣವಿದೆ. ಚಿತ್ರದಲ್ಲಿ ದಕ್ಷಿಣ ಭಾರತದ ನಟ ಜಗಪತಿ ಬಾಬು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
——

Be the first to comment

Leave a Reply

Your email address will not be published. Required fields are marked *

Translate »
error: Content is protected !!