ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ.
‘137 ಸೊಗಸಾದ ದಿನಗಳ ಚಿತ್ರೀಕರಣಕ್ಕೆ ಪೂರ್ಣವಿರಾಮ..’ ಎಂದು ‘ಸಪ್ತ ಸಾಗರದಾಚೆ’ ಚಿತ್ರೀಕರಣ ಮುಕ್ತಾಯಗೊಂಡಿರುವ ಸುದ್ದಿಯನ್ನು ರಕ್ಷಿತ್ ಶೆಟ್ಟಿ ಅವರು ಸಾಮಾಜಿಕ ಮಾಧ್ಯಮ ತಾಣದಲ್ಲಿ ಹಂಚಿಕೊಂಡಿದ್ದಾರೆ.
ಚಿತ್ರಮಂದಿರದಲ್ಲಿ ಸಪ್ತ ಸಾಗರದ ಅಲೆ ಪ್ರಾರಂಭವಾದಾಗ ನೀವು ನಿಮ್ಮ ಪಾತ್ರರೊಂದಿಗೆ ಚಿತ್ರ ವೀಕ್ಷಿಸುವಿರಿ ಎಂಬ ಭರವಸೆ ಇದೆ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
‘ಗೋಧಿಬಣ್ಣ ಸಾಧಾರಣ ಮೈಕಟ್ಟು’ ನಂತರ ನಟ ರಕ್ಷಿತ್ ಶೆಟ್ಟಿ, ನಿರ್ದೇಶಕ ಹೇಮಂತ್ ರಾವ್, ಸಂಗೀತ ನಿರ್ದೇಶಕ ಚರಣ್ ರಾಜ್ ಮತ್ತೆ ಈ ಚಿತ್ರದಲ್ಲಿ ಒಂದಾಗಿದ್ದಾರೆ.
ನಾಯಕಿಯಾಗಿ ರುಕ್ಮಿಣಿ ವಸಂತ ನಟಿಸುತ್ತಿದ್ದು, ಅವರ ಗೆಟಪ್ನಿಂದ ಇದೊಂದು ಸುಂದರ ಪ್ರೇಮ ಕಥೆಯ ಚಿತ್ರವೆಂಬುದು ತಿಳಿಯುತ್ತಿದೆ.
‘ಚಾರ್ಲಿ’ ಬಳಿಕ ರಕ್ಷಿತ್ ಶೆಟ್ಟಿ ಅತ್ಯಂತ ಭರವಸೆ ಇಟ್ಟುಕೊಂಡಿರುವ ಚಿತ್ರ ಇದಾಗಿದೆ. ರಕ್ಷಿತ್ ಶೆಟ್ಟಿ ತಮ್ಮದೇ ‘ಪರಂವ’ ನಿರ್ಮಾಣ ಸಂಸ್ಥೆಯಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಕಥೆಯಲ್ಲಿ ಹಲವು ಶೇಡ್ಗಳಿವೆ. ಒಂದು ಶೇಡ್ನಲ್ಲಿ ರಕ್ಷಿತ್ ಕೈದಿಯಾಗಿರುತ್ತಾರೆ ಎಂದು ನಿರ್ದೇಶಕ ಹೇಮಂತ್ರಾವ್ ಹೇಳಿದ್ದಾರೆ.
__
Be the first to comment