ನಿರ್ದೇಶನ, ನಿರ್ಮಾಣ: ಆರ್ ಚಂದ್ರು
ತಾರಾಗಣ: ಉಪೇಂದ್ರ, ಸುದೀಪ್, ಶಿವರಾಜ್ ಕುಮಾರ್ ಶ್ರಿಯಾ ಸರಣ್ ಇತರರು.
ರೇಟಿಂಗ್ : 4/5
71ರ ಮತದಾನದಲ್ಲಿ ಸರ್ಕಾರದ ಆಯ್ಕೆಗೆ ಅವಕಾಶ ಇದ್ದರೂ ಅಂಡರ್ ವರ್ಲ್ಡ್ ಶಕ್ತಿಯಾಗಿ ಯಾವ ರೀತಿಯಲ್ಲಿ ಕೆಲಸ ಮಾಡಿತು ಎನ್ನುವುದನ್ನು ಅದ್ದೂರಿಯಾಗಿ ತೆರೆಗೆ ತಂದಿರುವ ಚಿತ್ರ ಕಜ್ಜ.
ನಿರ್ದೇಶಕ ಆರ್ ಚಂದ್ರು ಅವರು ಅಂಡರ್ ವರ್ಲ್ಡ್ ಕಥೆಯನ್ನು ಇಟ್ಟುಕೊಂಡು ಶ್ರೀಮಂತವಾಗಿ ಚಿತ್ರವನ್ನು ತೆರೆಗೆ ತರುವ ಯತ್ನ ಮಾಡಿದ್ದಾರೆ. ಕಥೆ ಸ್ವಾತಂತ್ರ ಪೂರ್ವದಲ್ಲಿ ನಡೆಯುತ್ತದೆ. ಸ್ವಾತಂತ್ರ್ಯ ಸಿಕ್ಕಿದ ಬಳಿಕ ಅಂಡರ್ ವರ್ಲ್ಡ್ ಹೇಗೆ ಶಕ್ತಿಶಾಲಿಯಾಗಿ ಕೆಲಸ ಮಾಡುತ್ತದೆ. ಅಧಿಕಾರೇತರ ಶಕ್ತಿ ಕೇಂದ್ರಗಳು ವಿಸ್ತರಣೆ ಆಗುತ್ತಲೇ ಹೋಗುತ್ತವೆ ಎನ್ನುವುದು ಚಿತ್ರದಲ್ಲಿದೆ. ಇದನ್ನು ಕಬ್ಜ ಮಾಡುವುದು ಚಿತ್ರದ ಕಥಾವಸ್ತು ಆಗಿದೆ.
ಚಿತ್ರದ ಆರಂಭದಲ್ಲಿ ಸುದೀಪ್ ಅವರು ಪೊಲೀಸ್ ಆಫೀಸರ್ ಆಗಿ ಎಂಟ್ರಿ ಕೊಡುತ್ತಾರೆ. ಸುದೀಪ್ ಅಂಡರ್ ವರ್ಲ್ಡ್ ಕತೆಯನ್ನು ಹೇಳುತ್ತಾ ಹೋಗುತ್ತಾರೆ. ತನ್ನ ಸಹೋದರನ ಕೊಲೆಯನ್ನು ಕಣ್ಣಾರೆ ಕಂಡ ಅರ್ಕೇಶ್ವರ್ (ಉಪೇಂದ್ರ) ಸೇಡು ತೆಗೆದುಕೊಂಡು ಹೇಗೆ ಮುಂದೆ ಡಾನ್ ಆಗುತ್ತಾನೆ ಎನ್ನುವುದು ಚಿತ್ರದಲ್ಲಿದೆ. ಅಂಡರ್ ವರ್ಲ್ಡ್ ಕಥೆಗೆ ಚಂದ್ರು ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದಾರೆ.
ರಾಜ ಮನೆತನದ ಯುವತಿ ಸಾಮಾನ್ಯನೊಬ್ಬನನ್ನು ಮದುವೆಯಾಗುವುದು ತಂದೆಗೆ ಇಷ್ಟವಿಲ್ಲವಾದರೂ, ಮುಂದೆ ತಂದೆಯೇ ಮಗಳು ಹಾಗೂ ಮಕ್ಕಳನ್ನು ಬೆಂಕಿಗೆ ತಳ್ಳುವ ಸನ್ನಿವೇಶ ಮನಕರಗಿಸುತ್ತದೆ. ಚಿತ್ರದ ಕೊನೆಯಲ್ಲಿ ಶಿವಣ್ಣ ಗನ್ ಹಿಡಿದುಕೊಂಡು, ನಾನು ಕಬ್ಜ ಮಾಡಲು ಬಂದಿದ್ದೇನೆ. ಆದರೆ ನಾನು ಫೈರ್, ಎನ್ನುವ ಮೂಲಕ ಚಿತ್ರದ ಎರಡನೇ ಭಾಗ ತೆರೆಗೆ ಬರಲಿದೆ ಎನ್ನುವ ಸಂದೇಶವನ್ನು ನೀಡುವ ಯತ್ನವನ್ನು ಮಾಡುತ್ತಾರೆ.
ಚಿತ್ರದಲ್ಲಿ ಆಕ್ಷನ್ ಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ. ಇದು ಪ್ರೇಕ್ಷಕರಿಗೆ ಇಷ್ಟ ಆಗುವ ರೀತಿ ಇರುವುದು ಗಮನಾರ್ಹ ಸಂಗತಿ. ಪ್ರೇಕ್ಷಕರಿಗೆ ಹಿತ ಆಗುವ ರೀತಿಯಲ್ಲಿ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಶಿವಕುಮಾರ್ ಅವರ ಸೆಟ್ ಹಾಗೂ ಕ್ಯಾಮೆರಾ ಕೆಲಸಗಳು ಚಿತ್ರಕ್ಕೆ ಜೀವ ತುಂಬುವಲ್ಲಿ ಪ್ರಮುಖ ಪಾತ್ರ ವಹಿಸಿವೆ.
_____
Be the first to comment