Appu Abhimani : ಪವರ್ ಸ್ಟಾರ್ ಹುಟ್ಟುಹಬ್ಬದಂದು ಸೆಟ್ಟೇರಿದ ’ಅಪ್ಪು ಅಭಿಮಾನಿ’

ಪುನೀತ್‌ರಾಜ್‌ಕುಮಾರ್ ನಮ್ಮನ್ನು ಅಗಲಿದರೂ ಅವರ ನೆನಪಿನಲ್ಲಿ ಏನಾದರೂ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತದೆ. ಮಾರ್ಚ್’17 ಅಪ್ಪು ಹುಟ್ಟುಹಬ್ಬದಂದು ಗೌರವ ಸೂಚಿಸಲು ಅದ್ದೂರಿ ಚಿತ್ರ ’ಕಬ್ಜ’ ಬಿಡುಗಡೆಯಾಗುತ್ತಿದೆ. ಇದಲ್ಲದೆ ಕರ್ನಾಟಕ ಸೇರಿದಂತೆ ಹೊರ ರಾಜ್ಯ, ದೇಶಗಳಲ್ಲಿಯೂ ಬರ್ತ್‌ಡೇ ಸಂಭ್ರಮವನ್ನು ಸಡಗರದಿಂದ ಆಚರಿಸಿಕೊಳ್ಳುವುದುಂಟು. ಇದೇ ಸಂದರ್ಭದಲ್ಲಿ ಹೊಸಬರೇ ಸೇರಿಕೊಂಡು ’ಅಪ್ಪು ಅಭಿಮಾನಿ’ ಎನ್ನುವ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಫಾರ್ ಎವೆರ್ ಅಂತ ಅಡಿಬರಹದಲ್ಲಿ ಹೇಳಿಕೊಂಡಿದೆ.

’ತಾರಕಾಸುರ’ ಹಾಗೂ ಬಿಡುಗಡೆಯಾಗಬೇಕಾದ ’ಕಾಸಿದ್ರೆ ಕೈಲಾಸ’ ಸಿನಿಮಾಗಳಲ್ಲಿ ನಟಿಸಿರುವ ವೈಭವ್ ಈಗ ರವಿ ಅಂತ ಹೆಸರು ಬದಲಾಯಿಸಿಕೊಂಡಿದ್ದು, ನಾಯಕನಾಗಿ ಅಭಿನಯಿಸುತ್ತಿದ್ದಾರೆ.

ಶೇಖ್‌ಮುನೀರ್‌ಭಾಷ-ಬಾಬುರೆಡ್ಡಿ-ಚಂದ್ರಕಾಂತ್.ಹೆಚ್-ಶಿವಪ್ಪಕುಡ್ಲೂರು ಜಂಟಿಯಾಗಿ ಕೆಐಎಂ ಬ್ಯಾನರ್ ಅಡಿಯಲ್ಲಿ ಬಂಡವಾಳ ಹೂಡುತ್ತಿದ್ದಾರೆ. ಈ ಪೈಕಿ ಬಾಬುರೆಡ್ಡಿ ನಿರ್ದೇಶನ, ಶೇಖ್‌ಮುನೀರ್‌ಭಾಷ ಕಥೆ ಇರಲಿದೆ.
ಪ್ರಕಾಶ್‌ಶೆಟ್ಟಿ ಪರ್ದೂರು-ಕೋಡಿ.ಜಿ.ಹರೀಶ್ ಸಾಹಿತ್ಯದ ಗೀತೆಗಳಿಗೆ ದಿನೇಶ್‌ಕುಮಾರ್.ಈ ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಣ ದೀಪಕ್‌ಕುಮಾರ್.ಜೆ.ಕೆ, ಚಿತ್ರಕಥೆ ಪಾವನಾರೆಡ್ಡಿ, ಸಾಹಸ ಥ್ರಿಲ್ಲರ್‌ಮಂಜು, ನೃತ್ಯ ಮದನ್‌ಹರಿಣಿ-ಧನಂಜಯ್ ನಿರ್ವಹಿಸುತ್ತಿದ್ದಾರೆ. ಉಳಿದಂತೆ ನಾಯಕಿ, ತಾರಗಣದ ವಿವರಗಳನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು. ಪ್ರಚಾರದ ಮೊದಲ ಹಂತವಾಗಿ ಪೋಸ್ಟರ್‌ನ್ನು ಬಿಡಲಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!