puneeth rajkumar: ಮಾರ್ಚ್ 17ಕ್ಕೆ ಅಮೇಜಾನ್ ಪ್ರೈಮ್ ನಲ್ಲಿ ಗಂಧದಗುಡಿ

ಪುನೀತ್ ರಾಜ್​ಕುಮಾರ್ ನಟನೆಯ ‘ಗಂಧದಗುಡಿ’ ಸಾಕ್ಷ್ಯಚಿತ್ರ, ಪುನೀತ್ ರಾಜ್​ಕುಮಾರ್ ಅವರ ಬರ್ತ್​ಡೇ ಪ್ರಯುಕ್ತ ಮಾರ್ಚ್​ 17ರಂದು ಅಮೇಜಾನ್ ಪ್ರೈಮ್ ನಲ್ಲಿ ರಿಲೀಸ್ ಆಗಲಿದೆ.

‘ಗಂಧದಗುಡಿ’ ಸಾಕ್ಷ್ಯಚಿತ್ರದಲ್ಲಿ ಕಾಡಿನ ಕಥೆ ಇದೆ. ನಾಗರಹೊಳೆಯಿಂದ ಆರಂಭವಾಗುವ ಪುನೀತ್ ಹಾಗೂ ನಿರ್ದೇಶಕ ಅಮೋಘವರ್ಷ ಪಯಣ ರಾಜ್​ಕುಮಾರ್ ಹುಟ್ಟೂರಾದ ಗಾಜನೂರು, ಬಿಆರ್​ಟಿ ಟೈಗರ್ ರಿಸರ್ವ್, ಸಕ್ಕರೆ ಬೈಲು​, ಕರಾವಳಿಯ ನೇತ್ರಾಣಿ, ಜೋಗ ಜಲಪಾತ, ಆಗುಂಬೆ, ಉತ್ತರ ಕರ್ನಾಟಕದ ವಿಜಯನಗರ, ತುಂಗಭದ್ರಾ, ಕಾಳಿ ನದಿಯಲ್ಲಿ ಪೂರ್ಣಗೊಳ್ಳುತ್ತದೆ.

ಕರ್ನಾಟಕದ ಅರಣ್ಯ ವೈವಿಧ್ಯತೆಯ ದರ್ಶನ ಈ ಸಾಕ್ಷ್ಯಚಿತ್ರದಿಂದ ಆಗಿದೆ. ಕಳೆದ ಅಕ್ಟೋಬರ್​ 28ರಂದು ಈ ಸಾಕ್ಷ್ಯಚಿತ್ರ ಥಿಯೇಟರ್​ನಲ್ಲಿ ರಿಲೀಸ್ ಆಗಿತ್ತು. ಈಗ ಇದು ಒಟಿಟಿಗೆ ಕಾಲಿಡುತ್ತಿದೆ.

ಇಂದು ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರ ಜನ್ಮದಿನ ಆಗಿದ್ದು ಇಂದು ‘ಗಂಧದಗುಡಿ’ಯ ಒಟಿಟಿ ರಿಲೀಸ್ ದಿನಾಂಕ ತಿಳಿಸಲಾಗಿದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!