ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ‘ಮಾನ್ಸಿ’ ಪಾತ್ರದ ನಟಿ ಶಿಲ್ಪಾ ಅಯ್ಯರ್ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಶಿಲ್ಪಾ ಮಾರ್ಚ್ 10ರಂದು ಸಚಿನ್ ಎಂಬುವವರ ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಮ್ಯಾಟ್ರಿಮೋನಿ ಮೂಲಕ ಇವರಿಬ್ಬರ ಪರಿಚಯ ಆಗಿ ಮದುವೆ ನಡೆದಿದೆ.
ಶಿಲ್ಪಾ ಮತ್ತು ಸಚಿನ್ ಅವರದ್ದು ಅರೇಂಜ್ ಮ್ಯಾರೇಜ್. ಮನೆಯವರು ಮುಂದೆ ನಿಂತು ನಿಶ್ಚಯ ಮಾಡಿದ್ದು ಈಗ ಮದುವೆ ನಡೆದಿದೆ.
ಶಿಲ್ಪಾ ಅವರ ಪತಿ ಅಮೆರಿಕಾದಲ್ಲಿ ಕೆಲಸ ಮಾಡ್ತಾ ಇದ್ದು, ಶಿಲ್ಪಾ ಅವರು ಅಲ್ಲಿಗೆ ತೆರಳಲಿದ್ದಾರೆ. ಅವರು ನಟನೆಯಿಂದ ದೂರ ಉಳಿಯುತ್ತಾರಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.
ಸದ್ಯ ಶಿಲ್ಪಾ ಅವರು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿರುವ ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ನಾಯಕನ ಅತ್ತಿಗೆ ಪಾತ್ರವನ್ನು ಮಾಡುತ್ತಿದ್ದಾರೆ.
__

Be the first to comment