pushpa2: ದೊಡ್ಡ ಮೊತ್ತಕ್ಕೆ ಅಲ್ಲು ಡಿಮ್ಯಾಂಡ್

ಪುಷ್ಪ 2 ಚಿತ್ರಕ್ಕಾಗಿ ಅಲ್ಲು ಅರ್ಜುನ್ 150 ಕೋಟಿ ರೂಪಾಯಿ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿದೆ.

‘ಪುಷ್ಪ’ ಸಿನಿಮಾ ಹಿಂದಿಯಲ್ಲಿ 100 ಕೋಟಿ ರೂಪಾಯಿ ಗಳಿಸಿತ್ತು. ಚಿತ್ರದ ಒಟ್ಟಾರೆ ಕಲೆಕ್ಷನ್​ 300 ಕೋಟಿ ರೂಪಾಯಿ ಮೀರಿದೆ. ಈ ಕಾರಣಕ್ಕೆ ಎರಡನೇ ಚಾಪ್ಟರ್ ಸಾವಿರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಬಹುದು ಎನ್ನುವ ದೃಷ್ಟಿಯಿಂದ ಅಲ್ಲು ಅರ್ಜುನ್ ದೊಡ್ಡ ಮೊತ್ತ ಡಿಮ್ಯಾಂಡ್ ಮಾಡಿದ್ದಾರೆ.

ಒಬ್ಬ ಹೀರೋಗೆ 150 ಕೋಟಿ ರೂಪಾಯಿ ಕೊಡುವುದು ಕಷ್ಟದ ಮಾತು. ಹೀರೋ ಸಂಭಾವನೆ ಅಲ್ಲದೇ, ಇತರ ಕಲಾವಿದರ ಸಂಭಾವನೆ, ಮೇಕಿಂಗ್ ಖರ್ಚು, ನಿರ್ದೇಶಕರ ಸಂಭಾವನೆ ಇದನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಪಕರು ಅಲ್ಲು ಅರ್ಜುನ್​ಗೆ 125 ಕೋಟಿ ರೂಪಾಯಿ ನೀಡಲು ಒಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

ಸಂಭಾವನೆ ವಿಚಾರದಲ್ಲಿ ಅಲ್ಲು ಅರ್ಜುನ್ ಅವರು ಅಕ್ಷಯ್ ಕುಮಾರ್, ಶಾರುಖ್ ಖಾನ್, ಸಲ್ಮಾನ್ ಖಾನ್, ದಳಪತಿ ವಿಜಯ್ ಮೊದಲಾದವರನ್ನು ಮೀರಿಸಿದ್ದಾರೆ ಎಂದು ಹೇಳಲಾಗಿದೆ.

ಅಲ್ಲು ಅರ್ಜುನ್ ನಟನೆಯ ಪುಷ್ಪ 2 ಸಿನಿಮಾದಲ್ಲಿ ಸಾಯಿ ಪಲ್ಲವಿ ಕೂಡ ನಟಿಸುತ್ತಿದ್ದಾರೆ ಎನ್ನಲಾಗಿದೆ. ‘ಪುಷ್ಪ 2’ ಪಾತ್ರವರ್ಗ ಹಿರಿದಾಗಿದ್ದು, ಅದ್ದೂರಿಯಾಗಿ ಈ ಚಿತ್ರವನ್ನು ತೆರೆಮೇಲೆ ತರಲು ನಿರ್ದೇಶಕ ಸುಕುಮಾರ್ ಯೋಜನೆ ಹಾಕಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!