Kabzaa: ತಮಿಳಿನಲ್ಲಿ ಲೈಕಾ ಪಾಲಿಗೆ ಕಬ್ಜ ವಿತರಣೆ ಹಕ್ಕು

ಕನ್ನಡದ ಕಬ್ಜ ಚಿತ್ರಕ್ಕೆ ಕಾಲಿವುಡ್‌ ದೊಡ್ಡ ನಿರ್ಮಾಣ ಸಂಸ್ಥೆ ಲೈಕಾ ವಿತರಣೆ ಮಾಡಲು ಮುಂದೆ ಬಂದಿದೆ.

ಕಬ್ಜ ಚಿತ್ರ ಮಾರ್ಚ್‌-17 ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಲೈಕಾ ಮೀಡಿಯಾ ತಮಿಳುನಾಡಿನಾದ್ಯಂತ ಕಬ್ಜ ಚಿತ್ರ ವಿತರಿಸಲು ಮುಂದೆ ಬಂದಿದೆ. ಅಧಿಕೃತವಾಗಿಯೇ ಈ ಸುದ್ದಿಯನ್ನು ಹಂಚಿಕೊಂಡಿದೆ.

ಕಬ್ಜ ಚಿತ್ರದಲ್ಲಿ ಕನ್ನಡದ ಮೂರು ಸ್ಟಾರ್ಸ್ ಇದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಬ್ಜ ಚಿತ್ರಕ್ಕೆ ಹೊಸ ಖದರ್ ತಂದು ಕೊಟ್ಟಿದ್ದಾರೆ.

ಆರ್ ಚಂದ್ರು ನಿರ್ದೇಶನದ ಕಬ್ಜ ಚಿತ್ರ ಬಹು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಇದು ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟು ಹಾಕಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!