19.20.21Movie Review :ಬುಡಕಟ್ಟು ಜನರ ದೌರ್ಜನ್ಯದ ಕಥೆ ‘19.20.21’

 ಚಿತ್ರ ವಿಮರ್ಶೆ : ಬುಡಕಟ್ಟು ಜನರ ದೌರ್ಜನ್ಯದ ಕಥೆ ‘19.20.21’

ಚಿತ್ರ: ‘19.20.21’
ನಿರ್ದೇಶಕ: ಮಂಸೋರೆ
ನಿರ್ಮಾಣ: ದೇವರಾಜ್ ಆರ್
ತಾರಾಗಣ: ಶೃಂಗ ಬಿವಿ, ಬಾಲಾಜಿ ಮನೋಹರ್, ಸಂಪತ್, ಎಂ ಡಿ ಪಲ್ಲವಿ, ಮಹದೇವ್ ಹಡಪದ್, ಉಗ್ರಂ ಸಂದೀಪ್, ರಾಜೇಶ್ ನಟರಂಗ.
ರೇಟಿಂಗ್: 4/5

ಪಶ್ಚಿಮ ಘಟ್ಟದ ತಪ್ಪಲಿನ ಅರಣ್ಯದ ಅಂಚಿನಲ್ಲಿ ವಾಸವಿದ್ದ ಬುಡಕಟ್ಟು ಜನಾಂಗದ ಮೇಲೆ ನಕ್ಸಲರ ಜೊತೆಗಿನ ಒಡನಾಟಕ್ಕಾಗಿ ಪೊಲೀಸರು ನಡೆಸಿದ ದೌರ್ಜನ್ಯದ ಕಥೆಯೇ ‘19.20.21’.

ನಿರ್ದೇಶಕ ಮಂಸೋರೆ ಅವರು ನೈಜ ಘಟನೆಯನ್ನು ಆಧರಿಸಿದ ಸಿನಿಮಾವನ್ನು ಪ್ರೇಕ್ಷಕರಿಗೆ ಕಣ್ಣಿಗೆ ಕಟ್ಟುವಂತೆ ನಿರೂಪಣೆ ಮಾಡಿದ್ದಾರೆ. 2021 ರಲ್ಲಿ ನಕ್ಸಲ್ ಸಂಪರ್ಕಕ್ಕಾಗಿ ಮಂಜು ಹಾಗೂ ಆತನ ತಂದೆ ಮಹದೇವ್ ಹಡಪದ್ ಅವರು ಬಂಧನಕ್ಕೆ ಒಳಗಾಗುತ್ತಾರೆ. ಬಳಿಕ ಕಾನೂನು ಹೋರಾಟದ ಮೂಲಕ 10 ವರ್ಷದ ಬಳಿಕ ನಿರಪರಾಧಿ ಎಂದು ಕೋರ್ಟ್ ತೀರ್ಪು ನೀಡುತ್ತದೆ. ಈ ಹೋರಾಟದ ಕಥೆ ಸಿನಿಮಾದಲ್ಲಿ ಮೂಡಿ ಬಂದಿದೆ.

ಸಿನಿಮಾವನ್ನು ನೈಜವಾಗಿ ಚಿತ್ರಿಸಲು ನಿರ್ದೇಶಕರು ಯತ್ನಿಸಿದ್ದಾರೆ. ನಿಜ ಜೀವನದ ಪಾತ್ರಧಾರಿಯಾದ ವಿಠಲ ಮಲೆಕುಡಿಯ ಅವರನ್ನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಪದವಿ ಓದುತ್ತಿದ್ದ ವೇಳೆಗೆ ನಕ್ಸಲ್ ಸಂಪರ್ಕಕ್ಕಾಗಿ ಬಂಧಿಸಲಾಗಿತ್ತು. ಅವರಿಗೆ ಪರೀಕ್ಷೆ ಬರೆಯುವ ವೇಳೆಗೆ ಪೊಲೀಸರು ಕೈಯ ಕೋಳವನ್ನು ಕೂಡ ತೆಗೆಯಲು ಅವಕಾಶ ನೀಡಿರಲಿಲ್ಲ. ಈ ಘಟನೆಯನ್ನು ಸಿನಿಮಾದಲ್ಲಿ ಅದೇ ರೀತಿ ಚಿತ್ರಿಸಲಾಗಿದೆ.

ವಿಠಲ್ ಮಲೆಕುಡಿಯ ಅವರ ಪಾತ್ರವನ್ನು ರಂಗಭೂಮಿಯ ನಟ ಶೃಂಗ ಬಿ ವಿ ಮನಮುಟ್ಟುವಂತೆ ಅಭಿನಯಿಸಿದ್ದಾರೆ. ಉಳಿದಂತೆ ಮಹದೇವ ಹಡಪದ್, ಬಾಲಾಜಿ ಮನೋಹರ್, ಎಂ ಡಿ ಪಲ್ಲವಿ, ಉಗ್ರಂ ಸಂದೀಪ್, ರಾಜೇಶ್ ನಟರಂಗ, ಅವಿನಾಶ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಬುಡಕಟ್ಟು ಜನಾಂಗದ ಮೇಲೆ ನಡೆದ ಅಧಿಕಾರಶಾಹಿಯ ದೌರ್ಜನ್ಯದ ಕಥೆಯಾಗಿ ಪ್ರೇಕ್ಷಕರನ್ನು ಚಿತ್ರ ಕಾಡುತ್ತದೆ.
_____

Be the first to comment

Leave a Reply

Your email address will not be published. Required fields are marked *

Translate »
error: Content is protected !!