‘ಕಬ್ಜ’ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ನಟಿಸುತ್ತಿದ್ದು, ಹೊಸ ಪೋಸ್ಟರ್ ರಿವೀಲ್ ಆಗಿದೆ.
ಇಂದು ರಿಲೀಸ್ ಆದ ಪೋಸ್ಟರ್ನಲ್ಲಿ ಶಿವರಾಜ್ಕುಮಾರ್ ಅವರು ನಾಡ ಬಂದೂಕು ಹಿಡಿದು ನಿಂತಿದ್ದಾರೆ. ಸುದೀಪ್ ಅವರು ಸಣ್ಣ ಗನ್ ಹಿಡಿದ್ದಾರೆ. ಬ್ಯಾಕ್ಗ್ರೌಂಡ್ನಲ್ಲಿ ಉಪೇಂದ್ರ ಕೂಡ ಇದ್ದಾರೆ.
‘ಕಬ್ಜ’ ಸಿನಿಮಾ ಮಾರ್ಚ್ 17ರಂದು ರಿಲೀಸ್ ಆಗುತ್ತಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ. ಕನ್ನಡದ ಜೊತೆ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲೂ ಸಿನಿಮಾ ಬಿಡುಗಡೆ ಆಗುತ್ತಿದೆ.
ಮಾರ್ಚ್ 4ರಂದು ಚಿತ್ರದ ಟ್ರೇಲರ್ ರಿಲೀಸ್ ಆಗಲಿದೆ. ಈ ಟ್ರೇಲರ್ನಲ್ಲಿ ಸಿನಿಮಾದ ಕಥೆ ಬಗ್ಗೆ ಕುತೂಹಲದ ಸಂಗತಿ ತಿಳಿಯುವ ಸಾಧ್ಯತೆ ಇದೆ.
ಆರ್.ಚಂದ್ರು ಅವರು ‘ಕಬ್ಜ’ ಚಿತ್ರವನ್ನು ನಿರ್ಮಾಣ ಮಾಡಿ, ನಿರ್ದೇಶನ ಮಾಡಿದ್ದಾರೆ. ಉಪೇಂದ್ರ ಅವರಿಗೆ ಜೊತೆಯಾಗಿ ಶ್ರೀಯಾ ಶರಣ್ ನಟಿಸಿದ್ದಾರೆ. ಸಿನಿಮಾದ ಹಾಡುಗಳು ಈಗಾಗಲೇ ರಿಲೀಸ್ ಆಗಿ ಮೆಚ್ಚುಗೆ ಪಡೆದುಕೊಂಡಿವೆ.
___





Be the first to comment