ದರ್ಶನ್ ಸಂಬಂಧಿ ಮನೋಜ್ ಅಭಿನಯದ ಟಕ್ಕರ್ ಚಿತ್ರ ತನ್ನ ವಿಶೇಷತೆಗಳಿಂದ ಆಗಾಗ ಸುದ್ದಿಯಾಗುತ್ತಲೇ ಇದೆ. ಕೆ.ಎನ್. ನಾಗೇಶ್ ಕೋಗಿಲು ನಿರ್ಮಾಣದ ಈ ಚಿತ್ರವು ಈಗಾಗಲೇ ತನ್ನ ಬಹುಪಾಲು ಚಿತ್ರೀಕರಣವನ್ನೂ ಪೂರೈಸಿದೆ. ಮೈಸೂರಿನಲ್ಲಿ ಒಂದು ತಿಂಗಳು ಮಾತಿನ ಭಾಗದ ಚಿತ್ರೀಕರಣ ಮುಗಿಸಿ ನಂತರ ಬೆಂಗಳೂರಿನ ನಾಗರಬಾವಿ, ಹೆಚ್.ಎಂ.ಟಿ.ಫ್ಯಾಕ್ಟರಿ ಮತ್ತು ಕಂಠೀರವ ಸ್ಟುಡಿಯೋದಲ್ಲಿ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿದೆ. ಮೊನ್ನೆ ಹೆಚ್.ಎಂ.ಟಿ.ಗ್ರೌಂಡ್ನಲ್ಲಿ ನಡೆದ ಹೀರೋ ಇಂಟ್ರಡಕ್ಷನ್ ಫೈಟ್ ಇಡೀ ಚಿತ್ರದಲ್ಲಿ ಹೈಲೈಟಾಗಲಿದೆ. 10 ಸೆಕೆಂಡುಗಳಿಗೆ ಸಾವಿರ ಫ್ರೇಮುಗಳನ್ನು ಕ್ಯಾಪ್ಚರ್ ಮಾಡುವ ಫ್ಯಾಂಥಮ್ ಕ್ಯಾಮೆರಾವನ್ನು ಈ ಸೀನ್ಗಾಗಿ ಬಳಸಲಾಗಿದೆ. ಇದಕ್ಕೆ ಅತಿಹೆಚ್ಚು ಬಾಡಿಗೆಯಾದರೂ ಚಿತ್ರದ ಕ್ವಾಲಿಟಿಯಲ್ಲಿ ಎಲ್ಲೂ ಕಾಂಪ್ರಮೈಸ್ ಆಗಬಾರದೆಂದು ಹಣ ಹೂಡಿರುವುದಾಗಿ ನಿರ್ಮಾಪಕ ನಾಗೇಶ್ ಕೋಗಿಲು ತಿಳಿಸಿ.
ಹೆಚ್ಚಾಗಿ ಬಿಗ್ ಬಜೆಟ್ನ ಸ್ಟಾರ್ ಸಿನಿಮಾಗಳಲ್ಲಿ ಮಾತ್ರ ಬಳಸುವ ಈ ಕ್ಯಾಮೆರಾವನ್ನು ಟಕ್ಕರ್ ಚಿತ್ರಕ್ಕಾಗಿ ಹೈದ್ರಾಬಾದಿನಿಂದ ತರಿಸಲಾಗಿತ್ತು. ರಂಗಿತರಂಗ, ಇರುವುದೆಲ್ಲವ ಬಿಟ್ಟು, ರಾಜರಥದಂಥ ಸಿನಿಮಾಗಳಿಗೆ ಕೆಲಸ ಮಾಡುವ ಮೂಲಕ ಕ್ರಿಯಾಶೀಲ ಕ್ಯಾಮೆರಾಮನ್ ಎಂದೇ ಹೆಸರಾಗಿರುವ ವಿಲಿಯಮ್ ಡೇವಿಡ್ ಈ ಚಿತ್ರಕ್ಕಾಗಿ ಫ್ಯಾಂಥಮ್ ಕ್ಯಾಮೆರಾದಲ್ಲಿ ಸಾಹಸ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಅಂದಹಾಗೆ, ಟಕ್ಕರ್ ಚಿತ್ರದ ಎ ಸಾಹಸ ದೃಶ್ಯಗಳನ್ನೂ ಡಿಫರೆಂಟ್ ಡ್ಯಾನಿ ಡಿಫರೆಂಟಾಗಿಯೇ ಕಂಪೋಸ್ ಮಾಡಿದ್ದಾರೆ.
ರಘು ಶಾಸ್ತ್ರಿ ನಿರ್ದೇಶನದ ಈ ಚಿತ್ರದಲ್ಲಿ ಪುಟ್ಗೌರಿ ಮದುವೆ ಖ್ಯಾತಿಯ ರಂಜನಿ ರಾಘವನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಭಜರಂಗಿ ಲೋಕಿ, ಮನೋಜ್ ಎದುರು ಟಕ್ಕರ್ ಕೊಡುವ ವಿಲನ್ ಆಗಿ ಮಿಂಚಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಟಕ್ಕರ್ ಟೀಮ್ ಉಳಿದ ಹಾಡಿನ ಚಿತ್ರೀಕರಣಕ್ಕಾಗಿ ತಯಾರಾಗುತ್ತಿದೆ. ಮಣಿಕಾಂತ್ ಕದ್ರಿ ಟಕ್ಕರ್ ಚಿತ್ರದ ಸಂಗೀತ ನಿರ್ದೇಶಕರು.
Be the first to comment