Pushpa: ಪುಷ್ಪ 2 ಟೀಸರ್‌ ಶೀಘ್ರ?

ಸ್ಟೈಲಿಸ್ಟ್‌ ಸ್ಟಾರ್‌ ಅಲ್ಲು ಅರ್ಜುನ್‌ ಅವರ ಹುಟ್ಟುಹಬ್ಬವಾದ ಏಪ್ರಿಲ್‌ 8 ರಂದು ʼಪುಷ್ಪ-2ʼ ಸಿನಿಮಾದ ಟೀಸರ್‌ ರಿಲೀಸ್‌ ಆಗಲಿದೆ ಎಂದು ವರದಿಯಾಗಿದೆ.

ನಾಯಕ ನಟನ ಹುಟ್ಟುಹಬ್ಬದಂದು ಟೀಸರ್‌ ರಿಲೀಸ್‌ ಮಾಡಲು ಪ್ಲ್ಯಾನ್ ಚಿತ್ರ ತಂಡ ಮಾಡಿಕೊಂಡಿದೆ ಎನ್ನಲಾಗಿದೆ. ಸದ್ಯ ಅಲ್ಲು ಅರ್ಜುನ್‌ ಒಂದು ಹಂತದ ಶೂಟಿಂಗ್‌ ಮುಗಿಸಿ ರಾಜಸ್ಥಾನದಲ್ಲಿ ತನ್ನ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ.

ಸುಕುಮಾರ್‌ ನಿರ್ದೇಶನದ ಬಿಗ್‌ ಬಜೆಟ್‌ ಸಿನಿಮಾದಲ್ಲಿ ಮೊದಲ ಭಾಗಕ್ಕಿಂತ ಹೆಚ್ಚು ಆಕ್ಷನ್‌ ಹಾಗೂ ಥ್ರಿಲ್‌ ಇರಲಿದೆ ಎನ್ನಲಾಗಿದೆ. ಈಗಾಗಲೇ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ.

ಫಾಹದ್ ಫಾಸಿಲ್, ರಶ್ಮಿಕಾ ಮಂದಣ್ಣ ಮುಂತಾದ ಕಲಾವಿದರು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!