Rani: “ರಾನಿ” ಗಾಗಿ ಆಕಾಶದಿಂದ ಹಾರಿದ ಕಿರಣ್ ರಾಜ್

ಗುರುತೇಜ್ ಶೆಟ್ಟಿ ನಿರ್ದೇಶಿಸುತ್ತಿರುವ ನೂತನ ಚಿತ್ರ “ರಾನಿ”ಯಲ್ಲಿ ಕಿರಣ್ ರಾಜ್ ನಾಯಕರಾಗಿ ನಟಿಸಲಿದ್ದಾರೆ.

ಕಿರಣ್ ರಾಜ್ “ಕನ್ನಡತಿ” ಧಾರಾವಾಹಿ ನಂತರ “ರಾನಿ” ಗಾಗಿ ಆಕಾಶದಿಂದ ಹಾರಿ ಸುದ್ದಿ ಆಗಿದ್ದಾರೆ.

ನಾನು ಸ್ವಲ್ಪ ಭಿನ್ನವಾಗಿರಲಿ ಎಂದು ಯೋಚಿಸಿ, ಸ್ಕೈಡ್ರೈವ್ ಮೂಲಕ ಈ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದೆ. ನನ್ನ ಈ ಸಾಹಸಕ್ಕೆ ಮನೆಯವರಿಂದ, ಸ್ನೇಹಿತರಿಂದ ವಿರೋಧ ವ್ಯಕ್ತವಾಯಿತು. ನಾನು ಅಲ್ಲಿನ ಪರಿಣಿತರಿಂದ ತರಬೇತಿ ಪಡೆದು ಈ ಸಾಹಸಕ್ಕೆ ಮುಂದಾದೆ. ಇದು ಆಕ್ಷನ್ ಓರಿಯಂಟೆಡ್ ಚಿತ್ರವಾಗಿರುವುದರಿಂದ ಚಿತ್ರದಲ್ಲೂ ಮೈನವಿರೇಳಿಸುವ ಸಾಹಸ ದೃಶ್ಯಗಳಿರುತ್ತದೆ ಎಂದು ಕಿರಣ್ ರಾಜ್ ಹೇಳಿದ್ದಾರೆ.

ಕಿರಣ್ ರಾಜ್ ಅವರ ಈ ಸಾಹಸ ನನಗೂ ಸ್ವಲ್ಪ ದಿಗಿಲು ಹುಟ್ಟಿಸಿತ್ತು. ಆವರು ದುಬೈನಲ್ಲಿ ಅಗಸದಿಂದ ಹಾರುತ್ತಿದ್ದರೆ, ನಾನು ದೇವರ ಬಳಿ ಪ್ರಾರ್ಥಿಸುತ್ತಿದ್ದೆ. ಅವರು ಪೂರ್ತಿ ವಿಡಿಯೋ ಕಳುಹಿಸಿದ ಮೇಲೆ ನೆಮ್ಮದಿಯ ನಿಟ್ಟುಸಿರು ಬಿಟ್ಟೆ‌. ಕಿರಣ್ ರಾಜ್ ಈ ಸಿನಿಮಾಗಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. “ಬಡ್ಡೀಸ್” ನಂತರ ನಮ್ಮಿಬ್ಬರ ಕಾಂಬಿನೇಶನ್ ನಲ್ಲಿ ಈ ಚಿತ್ರ ಬರುತ್ತಿದೆ. ಮುಂದಿನ ಕೆಲವೆ ದಿನಗಳಲ್ಲಿ ಚಿತ್ರದ ಬಗ್ಗೆ ಹೆಚ್ಚು ಮಾಹಿತಿ ನೀಡುತ್ತೇನೆ ಎಂದು ನಿರ್ದೇಶಕ ಗುರುತೇಜ್ ಶೆಟ್ಟಿ ತಿಳಿಸಿದ್ದಾರೆ.

ಗುರುತೇಜ್ ಶೆಟ್ಟಿ ಅವರು ಹೇಳಿದ ಕಥೆ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆವು ಎಂದು ನಿರ್ಮಾಪಕರಾದ ಚಂದ್ರಕಾಂತ್ ಪೂಜಾರಿ ಹಾಗೂ ಉಮೇಶ್ ಹೆಗಡೆ ಹೇಳಿದ್ದಾರೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!