ಸ್ಯಾಂಡಲ್ವುಡ್ ಹಿರಿಯ ನಟ, ಮಾಜಿ ಸಚಿವ ಅನಂತ್ ನಾಗ್ ಅವರು ಫೆ.22ರಂದು ಬಿಜೆಪಿ ಸೇರಲಿದ್ದಾರೆ.
ಬಿಜೆಪಿ ಆಫೀಸ್ನಲ್ಲಿ ಸಂಜೆ 4.20ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಅವರು ಕಮಲ ಪಾಳಯಕ್ಕೆ ಸೇರಲಿದ್ದಾರೆ.
ಬಿಜೆಪಿ ಸೇರ್ಪಡೆ ಮೂಲಕ ಅನಂತ್ ನಾಗ್ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ? ಎನ್ನುವ ಬಗ್ಗೆ ಅವರ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.
ಶಾಸಕ, ಪರಿಷತ್ ಸದಸ್ಯರಾಗಿ ರಾಜಕೀಯ ಅನುಭವ ಇರುವಂತಹ ಅನಂತ್ ನಾಗ್, ಜೆ.ಎಚ್. ಪಟೇಲ್ ಸರ್ಕಾರದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಅನಂತ್ ನಾಗ್ ಅವರು 2004ರಲ್ಲಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ನಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು.
ಅನಂತ್ ನಾಗ್ ಅವರು ಪಕ್ಷವನ್ನು ಸೇರುವ ಸಂದರ್ಭ ಬಿಜೆಪಿಯ ಸಚಿವರು, ಪ್ರಮುಖ ನಾಯಕರೂ ಹಾಜರಿರಲಿದ್ದಾರೆ ಎಂದು ಹೇಳಲಾಗಿದೆ.
___





Be the first to comment