Pathan: ದಾಖಲೆ ಮಾಡಿದ ಪಠಾಣ್

ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ 1000 ಕೋಟಿ ರೂಪಾಯಿ ಗಳಿಸಿ ದಾಖಲೆ ಮಾಡಿದೆ.

2023 ರಲ್ಲಿ ಅತಿ ಹೆಚ್ಚು ಹಣ ಗಳಿಸಿರುವ ಬಾಲಿವುಡ್ ಸಿನಿಮಾ ಇದಾಗಿದೆ. ಅಭಿಮಾನಿಗಳು ಶಾರುಖ್ ಖಾನ್ ಮತ್ತು ದೀಪಿಕಾ ಅಭಿನಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಶಾರುಖ್ ಖಾನ್ ಬರೋಬ್ಬರಿ 4 ವರ್ಷಗಳ ಬಳಿಕ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ದೊಡ್ಡ ಪರದೆಯಲ್ಲಿ ನೆಚ್ಚಿನ ನಟನ ಅಭಿನಯ ನೋಡಿ ಜನ ಖುಷ್ ಆಗಿದ್ದಾರೆ.

ಸಿದ್ದಾರ್ಥ್ ಆನಂದ್ ಅವರು ಪಠಾಣ್ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಶಾರುಖ್ ಖಾನ್ ಅವರಿಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಜಾನ್ ಅಬ್ರಾಹಂ ಅವರು ವಿಲನ್ ಪಾತ್ರ ಮಾಡಿದ್ದಾರೆ.

ಸಿನಿಮಾ ಬಿಡುಗಡೆಗೂ ಮುಂಚೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಸಿನಿಮಾ ಬ್ಯಾನ್ ಮಾಡಬೇಕು ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಸಿನಿಮಾ ಎಲ್ಲವನ್ನೂ ಹಿಂದಿಕ್ಕಿ ಗೆಲುವು ಸಾಧಿಸಿದೆ.

ಶಾರುಖ್ ಖಾನ್ ಇದೊಂದು ದೇಶಭಕ್ತಿ ಸಿನಿಮಾ. ಸಿನಿಮಾ ನೋಡಿದ ಮೇಲೆ ವಿರೋಧಿಸಿ ಆಗ ನಾನು ಒಪ್ಪುತ್ತೇನೆ ಎಂದು ಹೇಳಿದ್ದರು.

ಪಠಾಣ್ ಸಿನಿಮಾದ ಸಕ್ಸಸ್ ಬಾಲಿವುಡ್‍ಗೆ ಶಕ್ತಿ ತುಂಬಿದೆ. ನಿರ್ಮಾಪಕರು ಒಳ್ಳೆಯ ಸಿನಿಮಾ ಮಾಡಲು ಮುಂದಾಗಿದ್ದಾರೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!