Kangana: ಪ್ರಶಸ್ತಿ ವಿರುದ್ಧ ತಿರುಗಿ ಬಿದ್ದ ಕಂಗನಾ

ವಿವಾದಾತ್ಮಕ ನಟಿ ಕಂಗನಾ ರನೌತ್ ದಾದಾ ಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಪ್ರತಿಷ್ಠಿತ ದಾದಾ ಸಾಹೇಬ್ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿಯ ಅತ್ಯುತ್ತಮ ನಟಿ ಹಾಗೂ ಅತ್ಯುತ್ತಮ ನಟ ಪ್ರಶಸ್ತಿಯನ್ನು ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್‌ಗೆ ನೀಡಲಾಗಿದೆ. ಇದು ಕಂಗನಾ ರನೌತ್‌ಗೆ ಅಸಮಧಾನ ತಂದಿದೆ. ಹೀಗಾಗಿ ಪ್ರಶಸ್ತಿ ನೀಡಿದ ಪ್ರಮುಖ ಕ್ಯಾಟಗರಿಯ ಪಟ್ಟಿಯನ್ನು ಅವರೇ ಸಿದ್ಧಪಡಿಸಿದ್ದಾರೆ.

ಕಂಗನಾ ರನೌತ್‌ಗೆ ಅವರೇ ಒಂದು ಪಟ್ಟಿಯನ್ನು ಸಿದ್ಧಪಡಿಸಿದ್ದು, ಇದರಲ್ಲಿ ರಿಷಬ್ ಶೆಟ್ಟಿಯ ‘ಕಾಂತಾರ’ ಚಿತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ಕಂಗನಾ ರೆಡಿ ಮಾಡಿದ ಪ್ರಶಸ್ತಿ ಪಟ್ಟಿ ಇಲ್ಲಿದೆ.

ಅತ್ಯುತ್ತಮ ನಟ – ರಿಷಬ್ ಶೆಟ್ಟಿ (ಕಾಂತಾರ)
ಅತ್ಯುತ್ತಮ ಸಿನಿಮಾ – ಕಾಂತಾರ
ಅತ್ಯುತ್ತಮ ನಿರ್ದೇಶಕ – ಎಸ್‌ಎಸ್ ರಾಜಮೌಳಿ (RRR)
ಅತ್ಯುತ್ತಮ ಪೋಷಕ ನಟ – ಅನುಪಮ್ ಖೇರ್ (ಕಾಶ್ಮೀರ್ ಫೈಲ್ಸ್)
ಅತ್ಯುತ್ತಮ ಪೋಷಕ ನಟಿ – ಟಬು (ದೃಶ್ಯಂ 2, ಭೂಲ್ ಭುಲಯ್ಯ 2)

ಈ ಹಿಂದೆ ‘ಕಾಂತಾರ’ ಸಿನಿಮಾ ನೋಡಿ ಬಂದಾಗಲೂ ಕಂಗನಾ ರನೌತ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಿನಿಮಾವನ್ನು ಹೊಗಳಿ ‘ಇದು ಸಿನಿಮಾ’ ಎಂದು ಮೆಚ್ಚುಗೆ ಸೂಚಿಸಿದ್ದರು.

ಕಂಗನಾ ರನೌತ್ ದಾದಾ ಸಾಹೇಬ್ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿಯನ್ನು ನೆಪೋಟಿಸಂ ಎಫೆಕ್ಟ್ ಎಂದು ಜರಿದಿದ್ದಾರೆ. ಈ ಪ್ರಶಸ್ತಿಯನ್ನು ಮುಂಬೈನ ಚೆಂಬೂರ್‌ನಲ್ಲಿ ಆಯೋಜಿಸಲಾಗಿತ್ತು.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!