Darshan: ಫೆ. 23 ರಿಂದ ಅಮೆಜಾನ್ ಪ್ರೈಮ್ ನಲ್ಲಿ ‘ಕ್ರಾಂತಿ’

ಫೆ. 23 ರಿಂದ ‘ಕ್ರಾಂತಿ’ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗಲಿದೆ.

ವಿ ಹರಿಕೃಷ್ಣ ನಿರ್ದೇಶನದ ಈ ಚಿತ್ರದಲ್ಲಿ ದರ್ಶನ್ ತೂಗುದೀಪ ಮತ್ತು ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ನಟರಾದ ವಿ ರವಿಚಂದ್ರನ್, ತರುಣ್ ಅರೋರಾ ಮತ್ತು ಸುಮಲತಾ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಶ್ರೀಮಂತ ಎನ್‌ ಆರ್ ಐ ಉದ್ಯಮಿ ಕ್ರಾಂತಿ ರಾಯಣ್ಣ (ದರ್ಶನ್) ತನ್ನ ಬಾಲ್ಯದ ಶಾಲೆಯ ಶತಮಾನೋತ್ಸವ ಸಮಾರಂಭ ಆಚರಿಸಲು ಭಾರತಕ್ಕೆ ಹಿಂತಿರುಗುತ್ತಾರೆ. ಆದರೆ ಸಮಾರಂಭ ಆರಂಭವಾಗುತ್ತಿದ್ದಂತೆ ಶಾಲೆಯು ಏಕಾಏಕಿ ನೆಲಕ್ಕುರುಳುತ್ತದೆ. ಈ ವೇಳೆ ಹಲವರು ಮೃತ ಪಡುತ್ತಾರೆ. ಹಲವರು ಗಾಯಗೊಳ್ಳುತ್ತಾರೆ.

ಭ್ರಷ್ಟ ಉದ್ಯಮಿ ಸಾಲತ್ರಿ (ತರುಣ್ ಅರೋರಾ) ಮತ್ತು ಅವರ ಆಪ್ತರು ತಮ್ಮ ಖಜಾನೆಯನ್ನು ತುಂಬಿಸಿಕೊಳ್ಳಲು ಹೆಚ್ಚಿನ ಸರ್ಕಾರಿ ಶಾಲೆಗಳನ್ನು ಖಾಸಗೀಕರಣಗೊಳಿಸಲು ಈ ದುರಂತವನ್ನು ರೂಪಿಸಿದ್ದಾರೆ ಎಂದು ಕ್ರಾಂತಿ ಕಂಡುಕೊಳ್ಳುತ್ತಾರೆ.

ಬಳಿಕ ಅವರು ಶಾಲೆಗಳು ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಸಾಲತ್ರಿ ವಿರುದ್ಧ ಸಮರ ಸಾರುವುದು ಚಿತ್ರದ ಕಥೆಯಾಗಿದೆ.

ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ 240 ಕ್ಕೂ ಹೆಚ್ಚು ದೇಶಗಳು ಮತ್ತು ಪ್ರದೇಶಗಳಲ್ಲಿ ಪ್ರೈಮ್ ಸದಸ್ಯರಿಗೆ ‘ಕ್ರಾಂತಿ’ ವೀಕ್ಷಣೆಗೆ ಲಭಿಸಲಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!