ಸೈನ್ಸ್-ಫಿಕ್ಷನ್ ಸಿನಿಮಾ ‘ಮಂಡಲ’ ಮಾರ್ಚ್ 10ರಂದು ತೆರೆ ಕಾಣಲಿದೆ.
ಫಸ್ಟ್ ಲುಕ್ ಮೂಲಕ ಗಮನ ಸೆಳೆದ ‘ಮಂಡಲ’ ಫ್ಯಾಮಿಲಿ ಡ್ರಾಮಾ ಸಬ್ಜೆಕ್ಟ್ ಹೊಂದಿದೆ. ಮೊದಲ ಚಿತ್ರದಲ್ಲಿ ಒಂದೊಳ್ಳೆ ಸಬ್ಜೆಕ್ಟ್ ಜೊತೆಗೆ ಅನುಭವಿ ಕಲಾವಿದರನ್ನು ಒಟ್ಟುಗೂಡಿಸಿ ನಿರ್ದೇಶನ ಮಾಡಿದ್ದಾರೆ ಅಜಯ್ ಸರ್ಪೇಷ್ಕರ್.
ಅನಂತ್ ನಾಗ್, ಪ್ರಕಾಶ್ ಬೆಳವಾಡಿ, ಶರ್ಮಿಳಾ ಮಾಂಡ್ರೆ, ಸಂಯುಕ್ತ ಹೊರನಾಡು, ಕಿರಣ್ ಶ್ರೀನಿವಾಸ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.
2018ರಲ್ಲೇ ಮಂಡಲ ಸಿನಿಮಾದ ಚಿತ್ರೀಕರಣ ಮುಗಿದಿತ್ತು. ಸೈನ್ಸ್ ಫಿಕ್ಷನ್ ಸಿನಿಮಾವಾದ್ದರಿಂದ ಚಿತ್ರವನ್ನು ವಿಶ್ಯುವಲ್ ಎಫೆಕ್ಟ್ ಆವರಿಸಿಕೊಂಡಿದೆ. ಈ ಕೆಲಸದಲ್ಲಿರುವಾಗ ಕೋವಿಡ್ ಬಾಧಿಸಿ ಕೆಲಸ ಸ್ಥಗಿತವಾಗಿತ್ತು. ಇದೀಗ ಸಿನಿಮಾದ ಕೆಲಸ ಪೂರ್ಣಗೊಂಡಿದೆ. ಚಿತ್ರ ಬಿಡುಗಡೆಗೆ ಸಜ್ಜಾಗಿದೆ” ಎಂದು ಅಜಯ್ ಸರ್ಪೇಷ್ಕರ್ ಹೇಳಿದ್ದಾರೆ.
ಚಿತ್ರಕ್ಕೆ ಜೆಸ್ಸಿ ಕ್ಲಿಂಟನ್ ಸಂಗೀತ ನೀಡಿದ್ದಾರೆ. ರಾಮಿಶೆಟ್ಟಿ ಪವನ್ ಸಂಕಲನ, ಮನೋಹರ್ ಜೋಶಿ ಛಾಯಾಗ್ರಹಣ, ನಿತಿನ್ ಲುಕೋಸೆ ಸೌಂಡ್ ಡಿಸೈನ್, ಒಲಿವರ್ ಎಲ್ವಿಸ್, ಮನೋಜ್ ಬೆಳ್ಳೂರು ವಿಎಫ್ಎಕ್ಸ್, ಪ್ರಕಾಶ್ ಬೆಳವಾಡಿ ಹಾಗೂ ಅಜೆಯ್ ಸರ್ಪೇಷ್ಕರ್ ಅವರ ಚಿತ್ರಕಥೆ ಇದೆ.
___
Be the first to comment