ಮನೋಹರ್ ಕಾಂಪಲ್ಲಿ ಅವರ ಮುಂಬರುವ ರೋಮ್ಯಾಂಟಿಕ್ ಥ್ರಿಲ್ಲರ್ ಮ್ಯಾಟ್ನಿ ಸಿನಿಮಾದ ಹಾಡಿನ ಚಿತ್ರೀಕರಣ ಕುಲು ಮನಾಲಿಯಲ್ಲಿ ನಡೆದಿದೆ.
ಸತೀಶ್ ನೀನಾಸಂ ಮತ್ತು ಅದಿತಿ ಪ್ರಭುದೇವ ಹಾಡಿನ ಚಿತ್ರೀಕರಣದಲ್ಲಿ ಭಾಗಿ ಆದರು.
ಹಿಮಪಾತದ ನಡುವೆ 4 ದಿನಗಳ ಕಾಲ 5 ಡಿಗ್ರಿ ಸೆಲ್ಸಿಯಸ್ ವಾತಾವರಣದಲ್ಲಿ ಹಾಡಿನ ದೃಶ್ಯವನ್ನು ಚಿತ್ರೀಕರಿಸಲಾಗಿದೆ.
ಈ ಬಗ್ಗೆ ಮಾತನಾಡಿದ ಸತೀಶ್ ನೀನಾಸಂ, ‘ಚಳಿಯನ್ನು ತಡೆದುಕೊಳ್ಳಲು ನನಗೆ ಕೋಟ್ ಇತ್ತು. ಆದರೆ ಸೀರೆ ಮತ್ತು ಘಾಗ್ರಾ ಬಟ್ಟೆಗಳನ್ನು ಧರಿಸಿ ಚಿತ್ರೀಕರಣ ಮಾಡಬೇಕಾಗಿದ್ದ ಅದಿತಿಗೆ ತುಂಬಾ ಕಷ್ಟ ಇತ್ತು. ಕೆಲವು ಸವಾಲಿನ ಸನ್ನಿವೇಶಗಳು ಇದ್ದವು. ಆದರೆ ನಾವು ಬಿಡದೆ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದೇವೆ. ಹಾಡಿನ ಔಟ್ ಪುಟ್ ಚೆನ್ನಾಗಿ ಬಂದಿದೆ. ಇದು ವಿಂಟೇಜ್ ಫೀಲ್ ನೀಡುತ್ತದೆ’ ಎಂದು ತಿಳಿಸಿದ್ದಾರೆ.
ಪಾರ್ವತಿ ಎಸ್ ಗೌಡ ಬಂಡವಾಳ ಹೂಡಿರುವ ಈ ಚಿತ್ರದಲ್ಲಿ ನಾಗಭೂಷಣ್, ಶಿವರಾಜ್ ಕೆಆರ್ ಪೇಟೆ, ಪೂರ್ಣಚಂದ್ರ ಮೈಸೂರು ಮತ್ತು ಹೊಸಬರಾದ ದಿಗಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತವಿರುವ ಈ ಚಿತ್ರಕ್ಕೆ ಸುಧಾಕರ್ ಮತ್ತು ಕೀರ್ತನ್ ಪೂಜಾರ್ ಛಾಯಾಗ್ರಹಣವಿದೆ.
___

Be the first to comment