South Indian hero: ಫೆ.24ಕ್ಕೆ ಸೌತ್ ಇಂಡಿಯನ್ ಹೀರೋ

ಸೌತ್ ಇಂಡಿಯನ್ ಹೀರೋ ಚಿತ್ರ ಫೆ.24ರಂದು ರಾಜ್ಯಾದ್ಯಂತ 100 ಚಿತ್ರ ಮಂದಿರದಲ್ಲಿ ಬಿಡುಗಡೆಯಾಗಲಿದೆ.

ಚಿತ್ರದ ನಿರ್ದೇಶಕ ಹೆಚ್.ಎನ್ ನರೇಶ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಇದು ಹಂಪಿಯ ಒಂದು ಸಣ್ಣ ಊರಿನಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕನಾಗಿರುವ ನಾಯಕ ಹೇಗೆ ಚಲನಚಿತ್ರೋದ್ಯಮದಲ್ಲಿ ಸೂಪರ್ ಸ್ಟಾರ್ ಆಗುತ್ತಾನೆ ಎನ್ನುವ ಚಲನಚಿತ್ರವಾಗಿದೆ. ನಂತರ ಒಬ್ಬ ಸೂಪರ್‌ ಸ್ಟಾರ್ ಅವರಿಂದ ನಿಭಾಯಿಸಲಾಗದ ಸ್ಟಾರ್ ಡಮ್‌ನಿಂದ ತುಂಬಿದ ಜೀವನದಲ್ಲಿ ಬೀಳುತ್ತಾನೆ. ಮುಂದೆ ಏನಾಗುತ್ತದೆ ಎಂಬುದು ಕಥೆಯ ತಿರುಳು ಎಂದು ನಿರ್ದೇಶಕರು ಹೇಳಿದ್ದಾರೆ.

ಮೊದಲು ಫಸ್ಟ್ ರ್ಯಾಂಕ್ ರಾಜು ಚಿತ್ರ ನಿರ್ದೇಶನ ಮಾಡಿದ್ದೇನೆ. ಆ ಚಿತ್ರಕ್ಕೆ ಪ್ರೇಕ್ಷಕರು ಸ್ಪಂದನೆ ನೀಡಿದ್ದರು. ಈಗ ಅದೇ ರೀತಿ ಸೌತ್ ಇಂಡಿಯನ್ ಹೀರೋ ಚಿತ್ರ ನಿರ್ದೇಶನ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ಚಿತ್ರಕ್ಕೆ ಹರ್ಷವರ್ಧನ್ ರಾಜ್ ,ಅನಿಲ್ ಸಿ.ಜೆ ಸಂಗೀತ ನೀಡಿದ್ದಾರೆ. ವಿ.ಆರ್.ನಾಗೇಂದ್ರ ಪ್ರಸಾದ್, ಜಗದೀಶ್ ನಡಹಳ್ಳಿ, ಶಾಮ್ ರಾವ್, ವಿಜಯ್ ಈಶ್ವರ್ ಸಾಹಿತ್ಯ ನೀಡಿದ್ದಾರೆ.

ನಾಯಕ ನಟ ಆಗಿ ಸಾರ್ಥಕ್, ನಾಯಕ ನಟಿ ಆಗಿ ಕಾಶಿಮಾ ನಟಿಸಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!