Tanya: ಕಬ್ಜ ವಿಶೇಷ ಹಾಡಿನಲ್ಲಿ ತಾನ್ಯಾ ಹೋಪ್

ರಿಯಲ್ ಸ್ಟಾರ್ ಉಪೇಂದ್ರ ನಾಯಕನಾಗಿ ನಟಿಸಿರುವ ಬಹುಭಾಷಾ ಚಿತ್ರ ಕಬ್ಜ ಮಾರ್ಚ್ 17 ರಂದು ರಿಲೀಸ್ ಆಗಲಿದ್ದು, ನಿರ್ಮಾಪಕರು ವಿಶೇಷ ಹಾಡನ್ನು ಚಿತ್ರೀಕರಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ವಿಶೇಷ ಹಾಡಿನಲ್ಲಿ ನಟಿ ತಾನ್ಯಾ ಹೋಪ್ ನಟಿಸಿದ್ದು, ಮುಂಬರುವ ವಾರದಲ್ಲಿ ಚಿತ್ರೀಕರಿಸಲಾಗುವುದು ಎಂದು ಹೇಳಲಾಗಿದೆ. ಹಾಡಿನಲ್ಲಿ ಉಪೇಂದ್ರ ಮತ್ತು ಇತರ ಕಲಾವಿದರೊಂದಿಗೆ ತಾನ್ಯಾ ಕಾಣಿಸಿಕೊಳ್ಳಲಿದ್ದಾರೆ.

ದರ್ಶನ್ ಅವರ ಯಜಮಾನ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ತಾನ್ಯಾ, ಸ್ಯಾಂಡಲ್ ವುಡ್ ನ ಬಸಣ್ಣಿ ಎಂದೇ ಖ್ಯಾತರಾಗಿದ್ದಾರೆ. ಈ ಹಿಂದೆ ಉಪೇಂದ್ರ ಅವರೊಂದಿಗೆ ಆಕ್ಷನ್-ಕಾಮಿಡಿ ಚಿತ್ರ, ಹೋಮ್ ಮಿನಿಸ್ಟರ್ ನಲ್ಲಿ ಕೆಲಸ ಮಾಡಿದ್ದರು.

ಈ ಹಾಡಿಗೆ ವಿವಿಧ ಭಾಷೆಗಳಲ್ಲಿ ಕೆಲಸ ಮಾಡುವ ಜಾನಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಲಿದ್ದಾರೆ. ಅವರು ಆಯುಷ್ ಶರ್ಮಾ ಅವರ ಮುಂಬರುವ ಹಿಂದಿ ಚಿತ್ರದಲ್ಲಿ ವಿಶೇಷ ಹಾಡಿನಲ್ಲಿ ತಾನ್ಯಾ ಅವರೊಂದಿಗೆ ಕೆಲಸ ಮಾಡಿದ್ದಾರೆ.

ಆರ್ ಚಂದ್ರು ಬರೆದು ನಿರ್ದೇಶಿಸಿರುವ ಕಬ್ಜಾ ಒಂಬತ್ತು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಹೈದರಾಬಾದ್ ನಲ್ಲಿ ನಡೆದ ಸಮಾರಂಭದಲ್ಲಿ ಇತ್ತೀಚೆಗೆ ಬಹು ಭಾಷೆಗಳಲ್ಲಿ ಮೊದಲ ಲಿರಿಕಲ್ ಸಾಂಗ್ ವೀಡಿಯೊವನ್ನು ಬಿಡುಗಡೆ ಮಾಡಲಾಯಿತು.

ಕಬ್ಜ 1940-80ರ ನಡುವೆ ನಡೆದ ಗ್ಯಾಂಗ್ಸ್ಟರ್ ಅವಧಿಯ ಚಿತ್ರ ಆಗಿದೆ. ಚಿತ್ರದಲ್ಲಿ ಉಪೇಂದ್ರ ಗ್ಯಾಂಗ್ಸ್ಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅನೂಪ್ ರೇವಣ್ಣ, ಪ್ರಮೋದ್ ಶೆಟ್ಟಿ, ಮುರಳಿ ಶರ್ಮಾ, ಜಗಪತಿ ಬಾಬು, ಡ್ಯಾನಿಶ್ ಅಖ್ತರ್ ಸೈಫಿ, ಪ್ರದೀಪ್ ರಾವತ್, ಕಬೀರ್ ದುಹಾನ್ ಸಿಂಗ್ ಜಯಪ್ರಕಾಶ್ ಮತ್ತು ಕೋಟಾ ಶ್ರೀನಿವಾಸ್ ನಟಿಸಿದ್ದಾರೆ. ಸುದೀಪ್, ಶ್ರಿಯಾ ಸರಣ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸಿನಿಮಾವನ್ನು ಎಂಬಿಟಿ ನಾಗರಾಜ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ, ಎಜೆ ಶೆಟ್ಟಿ ಛಾಯಾಗ್ರಹಣವಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!