Harshika 12 ಚಿತ್ರಗಳ ರಿಲೀಸ್ ನತ್ತ ಹರ್ಷಿಕಾ ಚಿತ್ತ

ಸಾಲು ಸಾಲು ಚಿತ್ರಗಳಲ್ಲಿ ನಟಿಸಿರುವ ಹರ್ಷಿಕಾ ಪೂಣಚ್ಚ ಅವರು 2023ರಲ್ಲಿ ಹೆಚ್ಚಿನ ಯಶಸ್ಸು ಕಾಣುವ ನಿರೀಕ್ಷೆ ಹೊಂದಿದ್ದಾರೆ.

ತಂದೆಯ ಅನಾರೋಗ್ಯದ ಕಾರಣದಿಂದಾಗಿ ಸುಮಾರು ಒಂದು ವರ್ಷ ನಟನೆಯಿಂದ ದೂರ ಉಳಿದಿದ್ದ ಹರ್ಷಿಕಾ ಅವರು ನಟಿಸಿರುವ 9 ಕನ್ನಡ ಚಿತ್ರಗಳು, ಎರಡು ಭೋಜಪುರಿ, ಒಂದು ಮಳೆಯಾಳಂ ಚಿತ್ರಗಳು ಬಿಡುಗಡೆಗೆ ಎದುರು ನೋಡುತ್ತಿವೆ.

ಕರೋನ ಸಮಯದಲ್ಲಿ ಸಿನಿಮಾಗಳಿಂದ ದೂರ ಉಳಿದಿದ್ದ ಹರ್ಷಿಕಾ ಭುವನಂ ಫೌಂಡೇಶನ್ ಮೂಲಕ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಈಗ ಅವರು ನಟಿಸಿರುವ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ.

ಲಯ ಕೋಕಿಲ ನಿರ್ದೇಶನದ ಹಾರರ್ ಥ್ರಿಲ್ಲರ್ ತಾಯ್ತ ಚಿತ್ರದಲ್ಲಿ ಹರ್ಷಿಕಾ ನಟಿಸಿದ್ದಾರೆ. ಮತ್ತೊಂದು ಕನ್ನಡ ಚಿತ್ರ ಕಾಸಿನ ಸರ ಈ ತಿಂಗಳು ತೆರೆಗೆ ಬರುವ ನಿರೀಕ್ಷೆ ಇದೆ.

ಮಾರಕಾಸ್ತ್ರ, ಹಗ್ಗ, ರಾಘವೇಂದ್ರ ರಾಜಕುಮಾರ್ ಮಗಳ ಪಾತ್ರದಲ್ಲಿ ನಟಿಸುತ್ತಿರುವ ಸ್ತಬ, ಸೂಪರಾಗಿದೆ ಲೈಫು, ಕಟೆ,  ಕಾಳ ನಾಗಿಣಿ ಸೇರಿದಂತೆ ಒಟ್ಟು ಒಂಬತ್ತು ಕನ್ನಡ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

ಸಜನ್ ರೇ ಜೂಟ್ ಮತ್ ಬೋಲೋ, ಸನಮ್ ಮೇರೆ ಹಮ್ರಾಜ್ ಹೆಸರಿನ ಭೋಜಪುರಿ ಚಿತ್ರದಲ್ಲಿ ಅವರು ನಟಿಸಿದ್ದಾರೆ. ಒಟ್ಟು 12 ಚಿತ್ರಗಳು ಈ ವರ್ಷ ತೆರೆಗೆ ಬರುವ ನಿರೀಕ್ಷೆ ಇದೆ.

ಹರ್ಷಿಕಾ ಅವರು ನಕ್ಸಟ್ ಎಂಬ ಕನ್ನಡ ವೆಬ್ ಸರಣಿಯಲ್ಲೂ ಕಾಣಿಸಿಕೊಳ್ಳಲಿದ್ದಾರೆ.

ಎಂಟು ಭಾಷೆಗಳಲ್ಲಿ ನಟಿಸಿದರೂ ನನಗೆ ಹೆಸರು ತಂದು ಕೊಟ್ಟಿರುವುದು ಕನ್ನಡ ಚಿತ್ರರಂಗ. ಕರ್ನಾಟಕ ನನ್ನ ಮನೆ ಎಂದು ಹರ್ಷಿಕಾ ಹೇಳಿದ್ದಾರೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!