ಫೆಬ್ರವರಿ 4ರಂದು ಹೈದರಾಬಾದ್ನಲ್ಲಿ ‘ಕಬ್ಜ’ ಚಿತ್ರದ ಮೊದಲ ಲಿರಿಕಲ್ ಸಾಂಗ್ ಅನಾವರಣ ಆಗಲಿದೆ.
ಈ ಕುರಿತು ಮಾಹಿತಿ ನೀಡಲು ಆರ್. ಚಂದ್ರು ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ.
ಇದು ಪ್ಯಾನ್ ಇಂಡಿಯಾ ಸಿನಿಮಾ ಆದ್ದರಿಂದ ದೇಶದ ಹಲವು ನಗರಗಳಲ್ಲಿ ಒಂದೊಂದು ಸಾಂಗ್ ರಿಲೀಸ್ ಮಾಡಬೇಕು ಎಂದು ಆರ್. ಚಂದ್ರು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ದೊಡ್ಡ ಮಟ್ಟದಲ್ಲಿ ಟ್ರೇಲರ್ ಬಿಡುಗಡೆ ಮಾಡಲು ಅವರು ತಯಾರಿ ನಡೆಸುತ್ತಿದ್ದಾರೆ.
‘ಕನ್ನಡ ಚಿತ್ರರಂಗದಲ್ಲಿ ಈಗ ಪಾಸಿಟಿವ್ ವಾತಾವರಣ ಇದೆ. ಒಂದು ಸಿನಿಮಾದ ಗೆಲುವಿಗೆ ಎಲ್ಲರೂ ಹಾರೈಸುತ್ತಿದ್ದಾರೆ’ ಎಂದು ಚಂದ್ರು ಹೇಳಿದ್ದಾರೆ.
‘ಕನ್ನಡದಲ್ಲಿ ಈಗಾಗಲೇ ಬಂದಿರುವ ಪ್ಯಾನ್ ಇಂಡಿಯಾ ಸಿನಿಮಾಗಳು ಒಂದು ಹೆದ್ದಾರಿ ನಿರ್ಮಿಸಿವೆ. ಅದರಲ್ಲಿ ನಾವು ಸಾಗಬೇಕು. ಆಗಲೇ ಆ ಹೈವೇ ನಿರ್ಮಿಸಿದವರಿಗೆ ಗೌರವ ಸಿಕ್ಕಂತೆ ಆಗುತ್ತದೆ. ಯಾರಾದರೂ ಫಸ್ಟ್ ರ‍್ಯಾಂಕ್ ಬಂದರೆ ನಾನೂ ಕೂಡ ರ‍್ಯಾಂಕ್ ಬರಬೇಕು ಅಂತ ಓದುತ್ತೇನೆ. ಸುಮ್ಮನೆ ಫಸ್ಟ್ ರ‍್ಯಾಂಕ್ ಬರಬೇಕು ಅಂತ ಕನಸು ಕಾಣಲ್ಲ. ನನ್ನ ಜೊತೆ ಇಡೀ ತಂಡ ಕಷ್ಟಪಟ್ಟಿದೆ’ ಎಂದಿದ್ದಾರೆ ಚಂದ್ರು.
‘ಕಬ್ಜ’ ಘೋಷಣೆ ಮಾಡಿದ್ದು 3 ವರ್ಷಗಳ ಹಿಂದೆ. ಆದರೆ ಆ ಬಳಿಕ ಕೊರೊನಾ ಹಾವಳಿ ಶುರುವಾಯಿತು. ಹಲವಾರು ಅಡೆತಡೆಗಳು ಬಂದವು. ಅದನ್ನೆಲ್ಲ ಎದುರಿಸಿ, ಹತ್ತಾರು ಬಗೆಯಲ್ಲಿ ಸೆಟ್ ಹಾಕಿ ಚಿತ್ರೀಕರಣ ಮಾಡಲಾಯಿತು. ಇದೆಲ್ಲ ಸಾಧ್ಯವಾಗಿದ್ದು ಒಂದು ಟೀಮ್ ವರ್ಕ್ ಕಕಾರಣದಿಂ. ಎಲ್ಲರಿಂದಾಗಿ ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ’ ಎಂದು ಅವರು ಹೇಳಿದ್ದಾರೆ.
‘ಪುನೀತ್ ರಾಜ್ಕುಮಾರ್ ಅವರು ಅಭಿಮಾನಿಗಳ ಪಾಲಿನ ದೇವರು. ಅನೇಕ ಬಾರಿ ಅವರು ನನ್ನನ್ನು ಹುರಿದುಂಬಿಸಿದ್ದರು. ಹುಷಾರಾಗಿ ಸಿನಿಮಾ ಮಾಡು ಅಂತ ಮಾರ್ಗದರ್ಶನ ನೀಡುತ್ತಿದ್ದರು. ಹಾಗಾಗಿ ಅವರ ಬರ್ತ್ಡೇ ದಿನವೇ ಕಬ್ಜ ಬಿಡುಗಡೆ ಮಾಡುತ್ತಿದ್ದೇವೆ’ ಎಂದು ಚಂದ್ರು ಹೇಳಿದ್ದಾರೆ.
ಕಬ್ಜ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಚಿತ್ರದಲ್ಲಿ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಅವರು ಅಭಿನಯಿಸಿದ್ದಾರೆ. ನಾಯಕಿಯಾಗಿ ಶ್ರೀಯಾ ಶರಣ್ ನಟಿಸಿದ್ದಾರೆ. ಮಾರ್ಚ್ 17ರಂದು ಪುನೀತ್ ರಾಜ್ಕುಮಾರ್ ಅವರ ಜನ್ಮದಿನದಂದು ‘ಕಬ್ಜ’ ಬಿಡುಗಡೆ ಆಗಲಿದೆ.
___
Be the first to comment