ಚಿತ್ರ ತಾರೆಯರಿಗೆ ಸಾರ್ವಜನಿಕ ಜಾಗ, ಹಣ ಮತ್ತು ಸಂಪನ್ಮೂಲಗಳನ್ನು ಬಳಸಿಕೊಂಡು ಸ್ಮಾರಕ ನಿರ್ಮಾಣ ಮಾಡಬಾರದು ಎಂದು ನಟ ಚೇತನ್ ಹೇಳಿದ್ದಾರೆ.
ಹಲವಾರು ಕನ್ನಡಿಗರಂತೆಯೇ ನಟ, ನಟಿಯರು ಕೂಡ ಕೆಲಸ ಮಾಡಿ ಸಂಪಾದಿಸುತ್ತಾರೆ. ನಮ್ಮ ಸಮಾಜದಲ್ಲಿ ಅವರಿಗೆ ಅನಗತ್ಯ ಪ್ರಚಾರ ನೀಡಿದ್ದೇವೆ. ಅವರು ಸಿನಿಮಾ ಯಶಸ್ಸಿಗೆ ಅನಗತ್ಯವಾಗಿಯೇ ಗಮನ ಸೆಳೆಯುತ್ತಾರೆ. ಹಾಗಾಗಿ ಸ್ಮಾರಕಗಳನ್ನು ಕಟ್ಟಬಾರದು ಎಂದು ಅವರು ಮನವಿ ಮಾಡಿದ್ದಾರೆ.
ನಾಡಿಗೆ ಬೇಕಾಗಿದ್ದು ಸ್ಟಾರ್ ಗಳ ಸ್ಮಾರಕಗಳ ಬದಲು ಕರ್ನಾಟಕ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸುವ ವಸ್ತು ಸಂಗ್ರಹಾಲಯಗಳು. ನಮ್ಮ ನೆಲ ಸ್ಮಾರಕಗಳಿಗಿಂತ ವಸ್ತು ಸಂಗ್ರಹಾಲಯಗಳಿಗೆ ಬಳಕೆಯಾಗಲಿ ಎಂದು ನಟ ಚೇತನ್ ಒತ್ತಾಯಿಸಿದ್ದಾರೆ.
ಕಳೆದ ಭಾನುವಾರ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ಮೈಸೂರಿನಲ್ಲಿ ಉದ್ಘಾಟನೆ ಆಗಿದೆ. ಈ ಬೆನ್ನಲ್ಲೇ ಚೇತನ್ ಹೇಳಿರುವ ಮಾತುಗಳು ಚರ್ಚೆಗೆ ಕಾರಣವಾಗಿದೆ.
____

Be the first to comment