ಕ್ರಿಕೆಟಿಗ ದೋನಿ ಒಡೆತನದ ‘ಧೋನಿ ಎಂಟರ್ಟೈನ್ಮೆಂಟ್ಸ್’ ಮೊದಲ ತಮಿಳು ಸಿನಿಮಾ ‘ಲೆಟ್ಸ್ ಗೆಟ್ ಮ್ಯಾರೀಡ್’ ಮುಹೂರ್ತ ನೆರವೇರಿದೆ.
ಮುಹೂರ್ತ ಕಾರ್ಯಕ್ರಮಕ್ಕೆ ಧೋನಿ ಪತ್ನಿ ಸಾಕ್ಷಿ ಹಾಗೂ ಹಲವು ಸೆಲೆಬ್ರಿಟಿಗಳು ಭಾಗಿಯಾಗಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು.
‘ಲೆಟ್ಸ್ ಗೆಟ್ ಮ್ಯಾರೀಡ್’ ಚಿತ್ರಕ್ಕೆ ರಮೇಶ್ ತಮಿಲ್ಮನಿ ಆಕ್ಷನ್ ಕಟ್ ಹೇಳುತ್ತಿದ್ದು, ಇದು ಇವರ ನಿರ್ದೇಶನದ ಮೊದಲ ಸಿನಿಮಾವಾಗಿದೆ. ನಿರ್ದೇಶನದ ಜೊತೆಗೆ ಚಿತ್ರಕ್ಕೆ ಸಂಗೀತ ನಿರ್ದೇಶನವನ್ನು ಅವರೇ ಮಾಡುತ್ತಿದ್ದಾರೆ.
ಚಿತ್ರದಲ್ಲಿ ಹರೀಶ್ ಕಲ್ಯಾಣ್, ನಾದಿಯಾ ಹಾಗೂ ಇವಾನ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಖ್ಯಾತ ಕಾಮಿಡಿಯನ್ ಯೋಗಿ ಬಾಬು ನಟಿಸಲಿದ್ದಾರೆ.
ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಬ್ಜೆಕ್ಟ್ ಒಳಗೊಂಡ ಸಿನಿಮಾವಾಗಿದ್ದು, ಸಾಕ್ಷಿ ಧೋನಿ ಚಿತ್ರದ ಕಥೆ ಹಾಗೂ ಕಾನ್ಸೆಪ್ಟ್ ಹಿಂದಿನ ಶಕ್ತಿಯಾಗಿದ್ದಾರೆ.
ಮುಂದಿನ ದಿನಗಳಲ್ಲಿ ಉತ್ತಮ ಕಂಟೆಂಟ್ ಇರುವ ಇನ್ನೂ ಹೆಚ್ಚಿನ ಸಿನಿಮಾಗಳನ್ನು ನಿರ್ಮಾಣ ಮಾಡಲು ಯೋಜನೆ ಹಾಕಿಕೊಂಡಿದ್ದೇವೆ ಎಂದು ಸಾಕ್ಷಿ ತಿಳಿಸಿದ್ದಾರೆ.
___

Be the first to comment